ಹಾಕಿ: ಪಂಜಾಬ್ ತಂಡಕ್ಕೆ ಪ್ರಶಸ್ತಿ

7

ಹಾಕಿ: ಪಂಜಾಬ್ ತಂಡಕ್ಕೆ ಪ್ರಶಸ್ತಿ

Published:
Updated:

ಲಖನೌ: ಹಾಕಿ ಪಂಜಾಬ್ ಇಲ್ಲಿ ನಡೆದ 8ನೇ ಸೀನಿಯರ್ ರಾಷ್ಟ್ರೀಯ ನ್ಯಾಷನಲ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ಫೈನಲ್‌ ಪಂದ್ಯದಲ್ಲಿ ಪಂಜಾಬ್‌ 2–1 ಗೋಲುಗಳಲ್ಲಿ ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರಮೋಷನ್ ಬೋರ್ಡ್‌ (ಪಿಎಸ್‌ಪಿಬಿ) ತಂಡವನ್ನು ಮಣಿಸಿತು.

ಪಿಎಸ್‌ಪಿಬಿ ತಂಡ 3ನೇ ನಿಮಿಷದಲ್ಲಿಯೇ ಗೋಲಿನ ಆರಂಭ ಪಡೆಯಿತು. ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗುರ್ಜಿಂದರ್ ಸಿಂಗ್ ಗೋಲು ದಾಖಲಿಸಿದರು.

ಸರ್ವನ್‌ಜಿತ್ ಸಿಂಗ್‌ (53, 60ನೇ ನಿ.) ದಾಖಲಿಸಿದ ಎರಡು ಗೋಲುಗಳು ಪಂಜಾಬ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry