ಫಾರ್ಮುಲಾ–1: ವೆಟಲ್‌ಗೆ ಪ್ರಶಸ್ತಿ

7

ಫಾರ್ಮುಲಾ–1: ವೆಟಲ್‌ಗೆ ಪ್ರಶಸ್ತಿ

Published:
Updated:
ಫಾರ್ಮುಲಾ–1: ವೆಟಲ್‌ಗೆ ಪ್ರಶಸ್ತಿ

ಮೆಲ್ಬರ್ನ್‌: ಅಮೋಘ ಚಾಲನ ಕೌಶಲ ಮೆರೆದ ಫೆರಾರಿ ತಂಡದ ಚಾಲಕ ಸೆಬಾಸ್ಟಿಯನ್‌ ವೆಟಲ್‌, ಆಸ್ಟ್ರೇಲಿಯಾ ಗ್ರ್ಯಾನ್‌ ಪ್ರಿ ಫಾರ್ಮುಲಾ–1 ರೇಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಮೆಲ್ಬರ್ನ್ ಗ್ರ್ಯಾನ್‌ ಪ್ರಿ ಸರ್ಕ್ಯೂಟ್‌ನಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌ ವೆಟಲ್‌ 1 ಗಂಟೆ 29 ನಿಮಿಷ 33 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.

ಜರ್ಮನಿಯ ವೆಟಲ್‌ ಭಾಗವಹಿಸಿದ 200ನೇ ಗ್ರ್ಯಾನ್‌ ಪ್ರಿ ರೇಸ್‌ ಇದಾಗಿದೆ. ಅವರು ಒಟ್ಟು 48 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

‘ಪೋಲ್‌ ‍ಪೊಷಿಸನ್‌’ನೊಂದಿಗೆ ಸ್ಪರ್ಧೆ ಆರಂಭಿಸಿದ್ದ ಮರ್ಸಿಡೀಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ ಆರಂಭದಿಂದಲೇ ಶರವೇಗದಲ್ಲಿ ಮೋಟರ್‌ ಕಾರು ಓಡಿಸಿದರು. ಮೊದಲ 10 ಲ್ಯಾಪ್‌ಗಳವರೆಗೆ ಮುನ್ನಡೆ ಸಾಧಿಸಿದ್ದ ಅವರು 11ನೇ ಲ್ಯಾಪ್‌ನಲ್ಲಿ ತಪ್ಪು ಮಾಡಿದರು.ಇದರ ಲಾಭ ಎತ್ತಿಕೊಂಡ ವೆಟಲ್‌ ಮುನ್ನಡೆ ತಮ್ಮದಾಗಿಸಿಕೊಂಡರು. ಬಳಿಕ ಇಬ್ಬರ ನಡುವೆಯೂ ತುರುಸಿನ ಪೈಪೋಟಿ ಕಂಡುಬಂತು. ಆದರೆ ವೆಟಲ್‌ ಯಾವ ಹಂತದಲ್ಲೂ ಮುನ್ನಡೆ ಬಿಟ್ಟುಕೊಡದೆ ಮೊದಲಿಗರಾಗಿ ಗುರಿ ಸೇರಿದರು. ಹಾಲಿ ವಿಶ್ವ ಚಾಂಪಿಯನ್‌ ಹ್ಯಾಮಿಲ್ಟನ್‌ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಫೆರಾರಿ ತಂಡದ ಮತ್ತೊಬ್ಬ ಚಾಲಕ ಕಿಮಿ ರಾಯಿಕ್ಕೊನೆನ್‌ ಮೂರನೇಯವರಾಗಿ ಸ್ಪರ್ಧೆ ಮುಗಿಸಿದರು. ಫೋರ್ಸ್‌ ಇಂಡಿಯಾ ತಂಡವನ್ನು ಪ್ರತಿನಿಧಿಸಿದ್ದ ಸರ್ಜಿಯೊ ಪೆರೆಜ್‌ ಮತ್ತು ಎಸ್ಟೆಬನ್‌ ಒಕಾನ್‌ ಕ್ರಮವಾಗಿ 11, 12ನೇ ಸ್ಥಾನ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry