ವಿದ್ಯಾರ್ಥಿಗಳಿಗೆ ಕಿರಿಕಿರಿ

7

ವಿದ್ಯಾರ್ಥಿಗಳಿಗೆ ಕಿರಿಕಿರಿ

Published:
Updated:
ವಿದ್ಯಾರ್ಥಿಗಳಿಗೆ ಕಿರಿಕಿರಿ

ತುಮಕೂರು: ಸಿದ್ಧಗಂಗಾಮಠಕ್ಕೆ ಅಮಿತ್ ಶಾ ಆಗಮಿಸುತ್ತಿರುವುದರಿಂದ ಮಠದ ಆವರಣದಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿರುವ ಮಕ್ಕಳು ಕಿರಿಕಿರಿ ಅನುಭವಿಸಿದರು.

ಬಿಜೆಪಿ ಕಾರ್ಯಕರ್ತರ ಕೂಗಾಟ, ಮಾಧ್ಯಮದವರ ಗದ್ದಲಕ್ಕೆ ಮಠದ ಸಿಬ್ಬಂದಿ ಮೈಕ್ ನಲ್ಲಿ ಶಾಂತತೆ ಕಾಪಾಡಬೇಕು. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಮನವಿ ಮಾಡುತ್ತಿದ್ದಾರೆ.

ಕೂಗಾಟ ಮಾಡುವವರು 200 ಮೀಟರ್ ಆಚೆ ಹೋಗಿ ಕೂಗಾಡಿ ಎಂದು ಹೇಳಿದಾಗ ಗದ್ದಲ, ಕೂಗಾಟ ಕಡಿಮೆ ಆಯಿತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಿದ್ಧಗಂಗಾಮಠಕ್ಕೆ ನೀಡಲಿರುವ ಭೇಟಿ ಒಂದು ಗಂಟೆ ವಿಳಂಬವಾಗಿದೆ.

9.30ಕ್ಕೆ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿ 10.20ಕ್ಕೆ ತಿಪಟೂರಿಗೆ ತೆರಳಬೇಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry