5

'ಪ್ರಜಾವಾಣಿ' ಆ್ಯಪ್‌ ಸೇವೆ ಸ್ಥಗಿತ

Published:
Updated:
'ಪ್ರಜಾವಾಣಿ' ಆ್ಯಪ್‌ ಸೇವೆ ಸ್ಥಗಿತ

ನಮ್ಮ ಓದುಗರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಜಾವಾಣಿಯ ಆ್ಯಪ್ ಮತ್ತಿತರ ಡಿಜಿಟಲ್ ವೇದಿಕೆಗಳಲ್ಲಿ ಬದಲಾವಣೆಗಳನ್ನು ತರುತ್ತಿದ್ದೇವೆ. ಮುಂದಿನ ಕೆಲವು ತಿಂಗಳುಗಳ ಅವಧಿಯಲ್ಲಿ ಇವು ಕಾರ್ಯರೂಪಕ್ಕೆ ಬರುತ್ತಿವೆ. ಇದರ ಭಾಗವಾಗಿ ಪ್ರಜಾವಾಣಿ ಮೊಬೈಲ್ ಆ್ಯಪ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಐಓಎಸ್ ಮತ್ತು ಆಂಡ್ರಾಯ್ಡ್ ವೇದಿಕೆಗಳಲ್ಲಿರುವ ಆ್ಯಪ್‌ಗಳಲ್ಲಿ ಇನ್ನು ಮುಂದೆ ಯಾವುದೇ ಸುದ್ದಿ ಅಥವಾ ಮಾಹಿತಿಗಳು ಕಾಣಿಸುವುದಿಲ್ಲ. ಇದೇ ಮಾರ್ಚ್ 31ರಿಂದ ಇವುಗಳನ್ನು ಐಟ್ಯೂನ್ಸ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‌ಗಳಿಂದ ತೆರವು ಮಾಡುತ್ತಿದ್ದೇವೆ.

ಮುಂದಿನ ಕೆಲವೇ ತಿಂಗಳುಗಳಲ್ಲಿ ಐಓಎಸ್ ಮತ್ತು ಆಂಡ್ರಾಯ್ದ್ ವೇದಿಕೆಗಳಿಗಾಗಿ ಹೊಸ ಆ್ಯಪ್ ಅನ್ನು ಸಿದ್ಧಪಡಿಸುತ್ತಿದ್ದೇವೆ. ಡಿಜಿಟಲ್ ವೇದಿಕೆಗಳ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡಿರುವ ಈ ಆ್ಯಪ್‌ಗಳು ಸಿದ್ಧಗೊಂಡ ತಕ್ಷಣ ತಮ್ಮ ಗಮನಕ್ಕೆ ತರಲಾಗುವುದು. ಆ್ಯಪ್‌ಗಳನ್ನು ಬಳಸುತ್ತಿದ್ದ ವಿಶ್ವದ ಎಲ್ಲೆಡೆಯೂ ಇರುವ ಪ್ರಜಾವಾಣಿ ಓದುಗರಿಗೆ ಉಂಟಾಗಿರುವ ತೊಂದರೆಗಾಗಿ ವಿಷಾದಿಸುತ್ತೇವೆ. ಆ್ಯಪ್‌ನ ಹೊರತಾಗಿಯೂ ಜಾಲತಾಣ ಬಳಕೆಗೆ ಲಭ್ಯವಿದೆ. ಮೊಬೈಲ್ ಬ್ರೌಸರ್ ಬಳಸಿ ನೀವು http://prajavani.net ಬಳಸಬಹುದು. ನಿಮ್ಮ ಸಹಕಾರಕ್ಕಾಗಿ ನಮ್ಮ ತುಂಬು ಹೃದಯದ ಧನ್ಯವಾದಗಳು. ಜಗತ್ತನ್ನು ಕನ್ನಡ ಜಗತ್ತಿನೊಂದಿಗೆ ಬೆಸೆಯುವ ಧ್ಯೇಯಕ್ಕೆ ಪ್ರಜಾವಾಣಿ ಸದ್ದಾ ಬದ್ಧವಾಗಿದೆ.-ಸಂಪಾದಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry