ಸಹಸ್ರಕೋಟಿ ಶ್ರೀರಾಮನಾಮ ಲೇಖನ ಯಜ್ಞ ಪುಸ್ತಕ ಬಿಡುಗಡೆ

7

ಸಹಸ್ರಕೋಟಿ ಶ್ರೀರಾಮನಾಮ ಲೇಖನ ಯಜ್ಞ ಪುಸ್ತಕ ಬಿಡುಗಡೆ

Published:
Updated:

ಉಡುಪಿ: ರಾಮಾಯಣದದಲ್ಲಿ ಶ್ರೀರಾಮ 14 ವರ್ಷ ವನವಾಸವನ್ನು ಮಾತ್ರ ಉಲ್ಲೇಖಿಸಲಾಗಿದೆ. ಅದೇ 13,000 ವರ್ಷ ದೇಶವನ್ನು ಆಳ್ವಿಕೆ ನಡೆಸಿರುವುದು ಉಲ್ಲೇಖಿಸಿದ ಕಾರಣ ಜನರಲ್ಲಿ ಶ್ರೀರಾಮ ಕೇವಲ ಕಷ್ಟ ಮಾತ್ರ ಅನುಭವಿಸಿದ್ದಾನೆ ಎನ್ನುವ ತಪ್ಪು ತಿಳಿವಳಿಕೆ ಇದೆ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದರು.View Site (Unpublished)DashboardConfiguration

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದಲ್ಲಿ ಭಾನುವಾರ ರಾಮನವಮಿಯ ಪ್ರಯುಕ್ತ ಆಯೋಜಿಸಿದ್ದ ಸಹಸ್ರಕೋಟಿ ಶ್ರೀರಾಮನಾಮ ಲೇಖನ ಯಜ್ಞದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.Create Article | ಪ್ರಜಾವಾಣಿ

ಶ್ರೀರಾಮ ತನ್ನ ಚಿಕ್ಕಮ್ಮ ಕೈಕೆಯ ಇಚ್ಛೆಯಂತೆ ರಾಜನಾಗುವುದನ್ನು ಬಿಟ್ಟು ಕಾಡಿಗೆ ಹೋಗಿದ್ದಾನೆ, ಎನ್ನುವುದಕ್ಕಿಂತ ತನಗಾಗಿ ಹಗಲಿರುಳು ಕಾಯುವ ಭಕ್ತರಿಗೆ ದರ್ಶನ ನೀಡಲು ತೆರಳಿದ್ದಾನೆ ಎಂದರೆ ತಪ್ಪಲ್ಲ. ಒಂದು ವೇಳೆ ವನವಾಸಕ್ಕೆ ಹೋಗದೆ ಇದ್ದಿದ್ದರೆ ಆತನ ಭಕ್ತರಿಗೆ ಅನ್ಯಾಯವಾಗುತ್ತಿತ್ತು. ಶ್ರೀಮದ್ಭಾಗವತದಲ್ಲಿ ಉಲ್ಲೇಖಿಸಿರುವಂತೆ 14 ವರ್ಷ ವನವಾಸ ಮುಗಿಸಿ ಬಂದ ಶ್ರೀರಾಮ ತನ್ನ ಜೀವನವನ್ನು ಸುಖ ಸಂತೋಷದಿಂದ 13,000 ವರ್ಷಗಳ ಕಾಲ ರಾಜ್ಯ ಭಾರ ಮಾಡಿ ಆಳ್ವಿಕೆ ಮಾಡಿದ್ದಾನೆ ಎಂದು ಹೇಳಿದರು.

ಅದಮಾರು ಕಿರಿ ಈಶಪ್ರಿಯ ಸ್ವಾಮೀಜಿ, ಪ್ರಯಾಗದ ಶ್ರೀ ವಿದ್ಯಾತ್ಮ ತೀರ್ಥ ಸ್ವಾಮೀಜಿ ಇದ್ದರು.

**

ಭಕ್ತರಿಗಾಗಿ ಲೋಕಸಂಚಾರ–ಹೊರತು ಭಿಕ್ಷೆಗಾಗಿ ಅಲ್ಲ

ಕೆಲವೊಬ್ಬರು ಯಾಕ್ರೀ ಬೇಕು ಸ್ವಾಮೀಜಿಗಳಿಗೆ ಪಾದ ಪೂಜೆ, ಭಿಕ್ಷೆ ಅಂತ ಅಪಹಾಸ್ಯ ಹಾಗೂ ಆಕ್ಷೇಪ ಮಾಡುವವರು ಇದ್ದಾರೆ. ಆದರೆ ಸ್ವಾಮೀಜಿಗಳು ತನ್ನ ಭಕ್ತರಿಗೆ ಖುಷಿಯಾಗಲಿ ಅನ್ನುವ ದೃಷ್ಟಿಯಲ್ಲಿ ಲೋಕಸಂಚಾರ ಮಾಡುತ್ತಾರೆ ಹೊರತು ಭಿಕ್ಷೆಗಾಗಿ ಅಲ್ಲ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry