ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಂಡ್ರಾಯ್ಡ್‌ ಫೋನ್‌ಗಳಿಂದ ಫೇಸ್‌ಬುಕ್‌ ಬಳಕೆದಾರರ ಸಂಪರ್ಕ ಪಟ್ಟಿ, ಸಂದೇಶ ಮಾಹಿತಿ ಸಂಗ್ರಹ

Last Updated 26 ಮಾರ್ಚ್ 2018, 7:34 IST
ಅಕ್ಷರ ಗಾತ್ರ

ಬೆಂಗಳೂರು: ಫೇಸ್‌ಬುಕ್‌ ಬಳಕೆದಾರರ ಆ್ಯಂಡ್ರಾಯ್ಡ್‌ ಫೋನ್‌ಗಳಿಂದ ಫೋನ್‌ ಸಂಖ್ಯೆಗಳು ಹಾಗೂ ಸಂದೇಶಗಳನ್ನು ಸಂಗ್ರಹಿಸಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಲಾಗುತ್ತಿದೆ.

ಫೇಸ್‌ಬುಕ್‌ ಸಂಗ್ರಹಿಸಿರುವ ಮಾಹಿತಿ ಪರಿಶೀಲಿಸಿರುವ ಫೇಸ್‌ಬುಕ್‌ ಬಳಕೆದಾರರು, ಅವರ ಸಂಪರ್ಕ ಪಟ್ಟಿಯಲ್ಲಿರುವ ಹೆಸರು, ದೂರವಾಣಿ ಸಂಖ್ಯೆಗಳು, ಕರೆಗಳ ಪಟ್ಟಿ ಹಾಗೂ ಸಂದೇಶಗಳು ಇರುವುದನ್ನು ಗಮನಿಸಿದ್ದಾರೆ ಎಂದು ಎಆರ್‌ಎಸ್‌ ಟೆಕ್ನಿಕಾ ವರದಿ ಮಾಡಿದೆ.

ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಇತರೆ ಬಳಕೆದಾರರಿಗೆ, ಇಲ್ಲವೇ ಹೊರಗಿನ ಅಪ್ಲಿಕೇಷನ್‌ಗಳಿಗೆ ಮಾರಾಟ ಮಾಡಿಲ್ಲ ಅಥವಾ ಹಂಚಿಕೊಂಡಿಲ್ಲ. ಬಳಕೆದಾರರಿಗೆ ಫೇಸ್‌ಬುಕ್‌ ಅನುಭವ ಉತ್ತಮ ಪಡಿಸುವ ನಿಟ್ಟಿನಲ್ಲಿ ಮಾಹಿತಿ ಬಳಸಿಕೊಳ್ಳಲಾಗಿದೆ ಎಂದು ಫೇಸ್‌ಬುಕ್‌ ವಕ್ತಾರ ಹೇಳಿದ್ದಾರೆ.

ಸಂಪರ್ಕ ಪಟ್ಟಿಯಲ್ಲಿರುವವರ ಜತೆಗೆ ಮೆಸೆಂಜರ್‌ ಮೂಲಕ ಸಂಪರ್ಕಕ್ಕಾಗಿ ಬಳಸಲಾಗಿದೆ. ಕರೆ ಅಥವಾ ಸಂದೇಶದ ವಿವರವನ್ನು ಸಂಗ್ರಹಿಸಿಲ್ಲ ಎಂದು ಫೇಸ್‌ಬುಕ್‌ ಹೇಳಿರುವುದಾಗಿ ವರದಿಯಾಗಿದೆ.

ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾದ ಹಗರಣದ ಬೆನ್ನಲ್ಲೇ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌, ಅಮೆರಿಕ ಮತ್ತು ಇಂಗ್ಲೆಂಡ್‌ನ ಒಟ್ಟು ಒಂಬತ್ತು ಪ್ರಮುಖ ಪತ್ರಿಕೆಗಳಲ್ಲಿ ಭಾನುವಾರ ಪ್ರಮಾದಕ್ಕೆ ಕ್ಷಮೆ ಕೋರಿ ಜಾಹೀರಾತು ನೀಡಿದ್ದರು.

ಫೇಸ್‌ಬುಕ್‌ ಲೈಟ್‌ ಅಥವಾ ಮೆಸೆಂಜರ್‌ಗೆ ಬಳಕೆದಾರರು ಸೈನ್‌ ಅಪ್‌ ಮಾಡಿದಾಗ ಮಾಹಿತಿ ಸಂಗ್ರಹಕ್ಕೆ ಅನುಮತಿ ನೀಡುವ ಆಯ್ಕೆ ನೀಡಲಾಗುತ್ತದೆ. ಅದಕ್ಕೆ ಸಮ್ಮತಿಸಿದ ತಕ್ಷಣ ಮಾಹಿತಿಯೊಂದಿಗೆ ಸಂಸ್ಥೆ ಸಂಪರ್ಕ ಹೊಂದುತ್ತದೆ. ಯೂಸರ್‌ ಸೆಟ್ಟಿಂಗ್‌ನಲ್ಲಿ ಮಾಹಿತಿ ಸಂಗ್ರಹ ಆಯ್ಕೆಯನ್ನು ಆಫ್‌ ಮಾಡಬಹುದು. ಈ ಮೂಲಕ ಹಿಂದೆ ಆ್ಯಪ್‌ನಲ್ಲಿ ಸಂಗ್ರಹಗೊಂಡ ಎಲ್ಲ ಮಾಹಿತಿ ಅಳಿಸುತ್ತದೆ.

2015ರಲ್ಲಿ ಈ ಆಯ್ಕೆಯನ್ನು ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಪರಿಚಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT