‘ನಿಖಾ ಹಲಾಲ್’ ಸಿಂಧುತ್ವ ಪರಿಶೀಲನೆ ಸಾಂವಿಧಾನಿಕ ಪೀಠಕ್ಕೆ

7

‘ನಿಖಾ ಹಲಾಲ್’ ಸಿಂಧುತ್ವ ಪರಿಶೀಲನೆ ಸಾಂವಿಧಾನಿಕ ಪೀಠಕ್ಕೆ

Published:
Updated:
‘ನಿಖಾ ಹಲಾಲ್’ ಸಿಂಧುತ್ವ ಪರಿಶೀಲನೆ ಸಾಂವಿಧಾನಿಕ ಪೀಠಕ್ಕೆ

ನವದೆಹಲಿ: ಮುಸ್ಲಿಮರಲ್ಲಿ ಜಾರಿಯಲ್ಲಿರುವ ಬಹುಪತ್ನಿತ್ವ ಮತ್ತು ವಿಚ್ಛೇಧಿತ ಮಹಿಳೆಯ ಮರುಮದುವೆ–ನಿಖಾ ಹಲಾಲ್‌ಗಳು ಕಾನೂನು ಬದ್ಧವೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದು, ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಲಿದೆ ಎಂದು ಹೇಳಿದೆ.

ಈ ಎರಡೂ ಆಚರಣೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂರು ಅರ್ಜಿಗಳ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಈ ನಿರ್ಧಾರ ತೆಗೆದುಕೊಂಡಿದೆ.

ಮುಸ್ಲಿಮರಲ್ಲಿ ಜಾರಿಯಲ್ಲಿರುವ ಬಹುಪತ್ನಿತ್ವವು ವ್ಯಕ್ತಿಯೊಬ್ಬ ನಾಲ್ವರು ಮಹಿಳೆಯರನ್ನು ವಿವಾಹವಾಗಲು ಅವಕಾಶ ಮಾಡಿಕೊಡುತ್ತದೆ.

ತ್ರಿವಳಿ ತಲಾಖ್ ಮೂಲಕ ವಿಚ್ಛೇಧನ ಪಡೆದ ಮಹಿಳೆಯು, ತನ್ನ ಪತಿಯನ್ನು ಮರುಮದುವೆಯಾಗಬೇಕಾದರೆ ‘ನಿಖಾ ಹಲಾಲ್‌’ ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಆ ಮಹಿಳೆ ಬೇರೊಬ್ಬ ಪುರುಷನನ್ನು ವಿವಾಹವಾಗಿ ಆತನಿಂದ ವಿಚ್ಛೇಧನ ಪಡೆಯಬೇಕಾಗುತ್ತದೆ. ಆನಂತರವಷ್ಟೇ ಆ ಮಹಿಳೆ ತನ್ನ ಮೊದಲ ಪತಿಯನ್ನು ಮತ್ತೆ ಮದುವೆ ಮಾಡಿಕೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry