ಕೆರೆಗಳ ಹೂಳು ತೆಗೆಸುತ್ತೇನೆ

7

ಕೆರೆಗಳ ಹೂಳು ತೆಗೆಸುತ್ತೇನೆ

Published:
Updated:
ಕೆರೆಗಳ ಹೂಳು ತೆಗೆಸುತ್ತೇನೆ

ರಾಜ್ಯದ ಎಲ್ಲಾ ಕೆರೆಗಳಲ್ಲಿನ ಹೂಳನ್ನು ತೆಗೆಸುತ್ತೇನೆ. ಎಲ್ಲಾ ಖಾಸಗಿ ಶಾಲಾ ಕಾಲೇಜುಗಳನ್ನು, ಮಾದರಿ ಸರ್ಕಾರಿ ಶಾಲೆಗಳಾಗಿ ಪರಿವರ್ತಿಸಿ ಎಲ್ಲರಿಗೂ ಶುಲ್ಕರಹಿತ, ವಿದ್ಯಾಭ್ಯಾಸ ದೊರಕಿಸುತ್ತೇನೆ. ಒಂದಕ್ಕಿಂತ ಹೆಚ್ಚಿನ ನಿವೇಶನ/ಮನೆ ಹೊಂದಿರುವವರಿಂದ, ಅಂತಹ ಆಸ್ತಿಗಳನ್ನು ವಶಕ್ಕೆ ಪಡೆದು ಎಲ್ಲರಿಗೂ ಸೂರು ಕಲ್ಪಿಸುತ್ತೇನೆ.

ಕುಟುಂಬಕ್ಕೆ ಎರಡೇ ಮಕ್ಕಳು, ಅದರಲ್ಲಿ ಒಬ್ಬರು ಕಡ್ಡಾಯವಾಗಿ ರಾಷ್ಟ್ರದ ಸೇನೆಯಲ್ಲಿರಬೇಕೆಂಬ ಕಾನೂನನ್ನು ಜಾರಿಗೆ ತರುತ್ತೇನೆ. ಅರ್ಜಿಗಳಲ್ಲಿ ಜಾತಿ, ಧರ್ಮದ ವಿವರಗಳನ್ನು ಕೇಳದಂತೆ ಮಾಡುತ್ತೇನೆ. ಬೇಸಾಯವನ್ನು ಕೈಗಾರಿಕೆಯೆಂದು ಪರಿಗಣಿಸಿ, ಯುವಕರಿಗೆ ಎಲ್ಲಾ ಸವಲತ್ತುಗಳನ್ನು ದೊರಕಿಸಿಕೊಡುತ್ತೇನೆ. ನನ್ನ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಪೂರಕವಾಗಿ, ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಬಧ್ಧನಾಗಿರುತ್ತೇನೆ.

→ ವಿ.ಗುರುದತ್ತ, ರಾಮಕೃಷ್ಣನಗರ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry