ರಷ್ಯಾ: ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ ಅನಾಹುತ: 64 ಮಂದಿ ಸಾವು

7

ರಷ್ಯಾ: ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ ಅನಾಹುತ: 64 ಮಂದಿ ಸಾವು

Published:
Updated:
ರಷ್ಯಾ: ಶಾಪಿಂಗ್‌ ಮಾಲ್‌ನಲ್ಲಿ ಅಗ್ನಿ ಅನಾಹುತ: 64 ಮಂದಿ ಸಾವು

ಮಾಸ್ಕೊ, ರಷ್ಯಾ (ಎಪಿ): ಸೈಬೀರಿಯಾದ ಕೆಮೆರೊವೊ ನಗರದ ಶಾಪಿಂಗ್‌ ಮಾಲ್‌ವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 64 ಮಂದಿ ಮೃತಪಟ್ಟಿದ್ದಾರೆ.

‘ವಿಂಟರ್‌ ಚೆರ್ರಿ ಶಾಪಿಂಗ್‌ ಮಾಲ್‌ನಲ್ಲಿ ಭಾನುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಶಾಲೆಗೆ ರಜಾ ದಿನವಾದ ಕಾರಣ ಮಕ್ಕಳು ಮತ್ತು ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು’ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

‘ಅನಾಹುತ ನಡೆಯುವ ವೇಳೆ ಯಾವುದೇ ಎಚ್ಚರಿಕೆ ಗಂಟೆ ಮೊಳಗಿರಲಿಲ್ಲ. 120ಕ್ಕಿಂತಲೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಮಾಲ್‌ನಲ್ಲಿರುವ ಸಿನಿಮಾ ಮಂದಿರದ ಒಳಗೆ ಹೆಚ್ಚಿನ ಮೃತದೇಹಗಳು ಪತ್ತೆಯಾಗಿವೆ’ ಎಂದೂ ತಿಳಿಸಿದ್ದಾರೆ.

‘ಗಾಯಗೊಂಡಿರುವ ಹತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕನೇ ಮಹಡಿಯಿಂದ ಜಿಗಿದು 11 ವರ್ಷದ ಬಾಲಕನೊಬ್ಬ ತೀವ್ರ ಗಾಯಗೊಂಡಿದ್ದಾನೆ. ಆತನ ಸಹೋದರ ಹಾಗೂ ಪಾಲಕರು ಮೃತಪಟ್ಟಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry