ರೇಷ್ಮೆ ಸೀರೆ ಜೋಪಾನ

7

ರೇಷ್ಮೆ ಸೀರೆ ಜೋಪಾನ

Published:
Updated:
ರೇಷ್ಮೆ ಸೀರೆ ಜೋಪಾನ

ಸಾವಿರಾರು ರೂಪಾಯಿ ಕೊಟ್ಟು ಕೊಳ್ಳುವ ರೇಷ್ಮೆ ಸೀರೆಯನ್ನು ಸರಿಯಾಗಿ ಜೋಪಾನ ಮಾಡದಿದ್ದರೆ ಮೂರು, ನಾಲ್ಕು ಬಾರಿ ಹಾಕಿದ ನಂತರ ಹಳತೆನಿಸುತ್ತದೆ. ವರುಷ ಕಳೆದರೂ ಸೀರೆ ತನ್ನ ಮೊದಲಿನ ಸೊಬಗು ಕಳೆದುಕೊಳ್ಳದಂತೆ ಜೋಪಾನ ಮಾಡುವುದು ಹೇಗೆ ಎಂಬುದು ಗೊತ್ತೇ?

* ಸೀರೆಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಇಡಿ. ಆಗಾಗ್ಗೆ ಬಿಸಿಲಿಗೆ ಒಣಗಿಸಿ.

* ಸೀರೆಯನ್ನು ಪ್ರತಿ ಬಾರಿ ಧರಿಸಿದ ನಂತರ ಡ್ರೈಕ್ಲೀನ್‌ ಮಾಡಿಸಬೇಡಿ. ಇದರಿಂದ ಬಣ್ಣ ಮಾಸಿದಂತಾಗುತ್ತದೆ. ಎರಡು, ಮೂರು ಬಾರಿ ಸೀರೆ ಧರಿಸಿದ ನಂತರ ಡ್ರೈ ಕ್ಲೀನ್‌ ಮಾಡಿಸಿ.

* ರೇಷ್ಮೆ ಸೀರೆಯ ಮೇಲೆ ಯಾವುದೇ ಬಾಡಿ ಸ್ಪ್ರೇ, ಸುಗಂಧ ದ್ರವ್ಯ ಹಾಕಬೇಡಿ.

* ಸೀರೆ ಮೇಲೆ ಕಲೆಯಾಗಿದ್ದರೆ ಸಾಬೂನಿನಿಂದ ತೊಳೆಯಬೇಡಿ. ಶ್ಯಾಂಪೂನಿಂದ ತೊಳೆಯಿರಿ. ತಣ್ಣೀರನ್ನು ಬಳಸಿ. ಯಾವುದೇ ಕಾರಣಕ್ಕೂ ವಾಷಿಂಗ್‌ ಮೆಷಿನ್‌, ಬ್ರಷ್‌, ಬಿಸಿನೀರು ಬಳಸದಿರಿ.

* ಸೀರೆಯನ್ನು ತುಂಬಾ ದಿನಗಳವರೆಗೆ ಮಡಚಿ ಇಡಬೇಡಿ. ಎರಡು, ಮೂರು ತಿಂಗಳಿಗೊಮ್ಮೆ ಬಿಡಿಸಿ ಮತ್ತೊಮ್ಮೆ ಮಡಚಿ ಇದರಿಂದ ಸೀರೆ ಹಾಳಾಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry