ವಯಸ್ಸಾದವರಿಗೆ ವಿನಾಯಿತಿ: ಶಿಕ್ಷಕರ ಮನವಿ

7

ವಯಸ್ಸಾದವರಿಗೆ ವಿನಾಯಿತಿ: ಶಿಕ್ಷಕರ ಮನವಿ

Published:
Updated:

ಬೆಂಗಳೂರು: ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಮತ್ತು 55 ವರ್ಷ ಮೀರಿದ ಶಿಕ್ಷಕರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚುನಾವಣಾ ಆಯೋಗವನ್ನು ಕೋರಿದೆ.

ಗರ್ಭಿಣಿಯರು, ಚಿಕ್ಕ ಮಕ್ಕಳನ್ನು ಹೊಂದಿರುವ ಶಿಕ್ಷಕಿಯರು, ಅಂಗವಿಕಲ, ವಿಶೇಷ ಮಕ್ಕಳಿರುವ ಶಿಕ್ಷಕಿಯರಿಗೂ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಸಂಘ ಮನವಿ ಮಾಡಿದೆ.

ಶಿಕ್ಷಕಿಯರಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಮತಕ್ಷೇತ್ರ ಅಥವಾ ತಾಲ್ಲೂಕಿನಲ್ಲಿಯೇ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಕು. ಚುನಾವಣಾ ಕರ್ತವ್ಯಕ್ಕೆ ತೆರಳುವ ಶಿಕ್ಷಕ ವೃಂದಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು. ಚುನಾವಣಾ ಕಾರ್ಯ ಮುಗಿದ ಬಳಿಕ ರಾತ್ರಿ ವೇಳೆ ಅವರ ಸ್ಥಳಕ್ಕೆ ಹಿಂದಿರುಗಲು ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಮನವಿ ಪತ್ರದಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry