ಕ್ಯುಐಪಿ ಮೂಲಕ ಬಂಡವಾಳ ಸಂಗ್ರಹ

7

ಕ್ಯುಐಪಿ ಮೂಲಕ ಬಂಡವಾಳ ಸಂಗ್ರಹ

Published:
Updated:

ನವದೆಹಲಿ: ದೇಶದ ಕಂಪನಿಗಳು 2017–18ನೇ ಆರ್ಥಿಕ ವರ್ಷದ ಏಪ್ರಿಲ್‌–ಜನವರಿ ಅವಧಿಯಲ್ಲಿ ಅರ್ಹ ಸಾಂಸ್ಥಿಕ ಹೂಡಿಕೆದಾರರ (ಕ್ಯುಐಪಿ) ಮೂಲಕ ₹ 58 ಸಾವಿರ ಕೋಟಿ ಸಂಗ್ರಹಿಸಿವೆ.

2016–17ನೇ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹ 4,664 ಕೋಟಿ ಸಂಗ್ರಹಿಸಿದ್ದವು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಹಿತಿ ನೀಡಿದೆ.

2016–17ನೇ ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ಒಟ್ಟು ಮೊತ್ತಕ್ಕೆ (₹ 8,464 ಕೋಟಿ) ಹೋಲಿಸಿದರೂ ಏಳು ಪಟ್ಟು ಹೆಚ್ಚಿಗೆ ಇದೆ.

ವಹಿವಾಟು ವಿಸ್ತರಣೆ, ಸಾಲ ಮರುಪಾವತಿ, ದುಡಿಯುವ ಬಂಡವಾಳದ ಅಗತ್ಯಗಳಿಗಾಗಿ ಈ ಹಣ ಸಂಗ್ರಹಿಸಿವೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry