ಈಜಿಪ್ಟ್: ಅಧ್ಯಕ್ಷರ ಆಯ್ಕೆಗೆ ಮತದಾನ

7
ಪ್ರಚಾರದ ನೇತೃತ್ವ ವಹಿಸಿದ್ದಾತನೇ ಅಧ್ಯಕ್ಷರ ಎದುರಾಳಿ

ಈಜಿಪ್ಟ್: ಅಧ್ಯಕ್ಷರ ಆಯ್ಕೆಗೆ ಮತದಾನ

Published:
Updated:
ಈಜಿಪ್ಟ್: ಅಧ್ಯಕ್ಷರ ಆಯ್ಕೆಗೆ ಮತದಾನ

ಕೈರೊ: ಈಜಿಪ್ಟ್ ಅಧ್ಯಕ್ಷೀಯ ಚುನಾವಣೆಗೆ ಸೋಮವಾರ ಮತದಾನ ಆರಂಭವಾಯಿತು. ಮೂರು ದಿನ ಈ ಪ್ರಕ್ರಿಯೆ ನಡೆಯಲಿದ್ದು, ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್–ಸಿಸಿ ಅವರು ಮರು ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ. ಇವರ ಎದುರಾಳಿ ಮೌಸಾ ಮೊಸ್ತಾಫಾ ಮೌಸಾ. ರಾಜಕೀಯಕ್ಕೆ ಹೊಸಬರಾಗಿರುವ ಇವರು ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಅಬ್ದೆಲ್‌ ಅವರು ಅವಿರೋಧವಾಗಿ ಆಯ್ಕೆಯಾಗುವುದನ್ನು ತಪ್ಪಿಸಿದ್ದಾರೆ.

ಇವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವವರೆಗೂ ಅಬ್ದೆಲ್‌ ಅವರ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು. ತಾವು ಅಬ್ದೆಲ್‌ ಅವರ ಕೈಗೊಂಬೆ ಅಲ್ಲ ಎಂದು ಮೌಸಾ ಸ್ಪಷ್ಟಪಡಿಸಿದ್ದಾರೆ. ಉಳಿದ ಅಭ್ಯರ್ಥಿಗಳು ಲೆಕ್ಕಕ್ಕಿಲ್ಲ. ಮಾಜಿ ಸೇನಾ ಮುಖ್ಯಸ್ಥ ಸಾಮಿ ಅನಾನ್ ಅವರು ಕಣಕ್ಕಿಳಿಯುವುದಾಗಿ ಘೋಷಿಸಿದ ಬೆನ್ನಲ್ಲೇ ಅವರನ್ನು ಬಂಧಿಸಲಾಗಿತ್ತು.

ದೇಶದಾದ್ಯಂತ 13,687 ಮತಗಟ್ಟೆಗಳಲ್ಲಿ ಮತದಾನವು ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ನಡೆಯಿತು. ಮಂಗಳವಾರ ಹಾಗೂ ಬುಧವಾರವೂ ಮತದಾನ ನಡೆಯಲಿದೆ.

ನೂರಾರು ಸೈನಿಕರನ್ನು ಹತ್ಯೆ ಮಾಡಿರುವ ಐಎಸ್ ಬೆಂಬಲಿತ ಸಂಘಟನೆಯು ಮತದಾನ ಕೇಂದ್ರಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿತ್ತು. ಹೀಗಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

2013ರಲ್ಲಿ ಮೊಹಮದ್ ಮೊರ್ಸಿ ಅವರ ಆಡಳಿತದ ವಿರುದ್ಧ ಭಾರಿ ಪ್ರತಿಭಟನೆ ನಡೆದಾಗ   ಅವರು ಅಧಿಕಾರ ಕಳೆದುಕೊಳ್ಳುವಂತೆ ಮಾಡುವಲ್ಲಿ ಅಬ್ದೆಲ್‌ ಪ್ರಮುಖ ಪಾತ್ರ ವಹಿಸಿದ್ದರು. ನಂತರ 2014ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಬ್ದೆಲ್ ಅವರು ಮೊದಲ ಬಾರಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಶೇ 96.9ರಷ್ಟು ಮತ ಗಳಿಸಿದ್ದರು.

ಈ ಬಾರಿಯೂ ಅಬ್ದೆಲ್‌ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry