ವೃದ್ಧ ತಾಯಿಯನ್ನು ಒದ್ದ ಮಗ

7

ವೃದ್ಧ ತಾಯಿಯನ್ನು ಒದ್ದ ಮಗ

Published:
Updated:

ಹೊಸಪೇಟೆ: ಆಸ್ತಿಗಾಗಿ ವೃದ್ಧ ತಾಯಿಯನ್ನು ಒದ್ದು, ಹಿಂಸಿಸಿದ ಆರೋಪದ ಮೇಲೆ ನಗರದ ಸರ್ದಾರ್‌ ಮೊಹಲ್ಲಾ ನಿವಾಸಿ ಮಹ್ಮದ್‌ ಗಫೂರ್‌ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ.

ವೃದ್ಧೆ ಮಾಬುನ್ನಿ, ಸ್ಥಳೀಯರ ನೆರವಿನಿಂದ ತಮ್ಮ ಮಗನ ವಿರುದ್ಧ ಬಡಾವಣೆಯ ಠಾಣೆಗೆ ದೂರು ನೀಡಿದ್ದರು.

ಮಹ್ಮದ್‌ ಗಫೂರ್‌, ತಮ್ಮ ತಾಯಿಯನ್ನು ರಸ್ತೆ ಬದಿಯಲ್ಲೇ ಒದ್ದು ಹಿಂಸಿಸುವ ವಿಡಿಯೊ ವೈರಲ್‌ ಆಗಿದ್ದು, ಕುಳಿತಿದ್ದ ತಾಯಿಯ ಮೇಲೆ ಹಲ್ಲೆ ನಡೆಸಿ, ಚಪ್ಪಲಿ ಕಾಲಿನಿಂದ ಅವರ ಕುತ್ತಿಗೆಗೆ ಒದೆಯುವ, ನೋವಿನಿಂದ ಆಕೆ ಆತನನ್ನು ನೂಕಿ ರೋದಿಸುವ ದೃಶ್ಯಗಳು ಅದರಲ್ಲಿವೆ.

ಮಾರ್ಚ್‌ 23ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry