ಮಾರುಕಟ್ಟೆಯಿಂದ ಸಾಲ: ದೃಢಪಡಿಸಿದ ಕೇಂದ್ರ

7

ಮಾರುಕಟ್ಟೆಯಿಂದ ಸಾಲ: ದೃಢಪಡಿಸಿದ ಕೇಂದ್ರ

Published:
Updated:

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ (2018–19) ಮಾಡಬೇಕಾದ ವೆಚ್ಚಗಳನ್ನು ಸರಿದೂಗಿಸಲು ಮಾರುಕಟ್ಟೆಯಿಂದ ₹4.62 ಲಕ್ಷ ಕೋಟಿ ಸಾಲ ಪಡೆಯುವುದಾಗಿ ಕೇಂದ್ರ ಸರ್ಕಾರ ಸೋಮವಾರ ದೃಢಪಡಿಸಿದೆ.

ಸರ್ಕಾರಿ ಬಾಂಡ್‌ಗಳ ಮೂಲಕ ಎರಡು ಹಂತಗಳಲ್ಲಿ ಬಂಡವಾಳ ಸಂಗ್ರಹಿಸುವುದಾಗಿ ಕೇಂದ್ರ ಹೇಳಿದೆ.

ಮುಂದಿನ ಹಣಕಾಸು ವರ್ಷಕ್ಕೆ ಮಾರುಕಟ್ಟೆಯಿಂದ ನಿಧಿ ಸಂಗ್ರಹಿಸುವ ಸರ್ಕಾರದ ಯೋಜನೆಯ ಬಗ್ಗೆ ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಗರ್ಗ್‌ ಸೋಮವಾರ ಮಾಹಿತಿ ಹಂಚಿಕೊಂಡರು.

ಮೊದಲ ಹಂತದಲ್ಲಿ 2018–19ನೇ ಸಾಲಿನ ಮೊದಲ ಆರು ತಿಂಗಳಲ್ಲಿ ಸರ್ಕಾರಿ ಸಾಲಪತ್ರಗಳ ಮೂಲಕ ₹2,88,000 ಕೋಟಿ ಅಲ್ಪಾವಧಿ ಸಾಲ ಸಂಗ್ರಹಿಸುವುದಾಗಿ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry