2 ವರ್ಷದಲ್ಲಿ 184 ಸಿಂಹಗಳ ಸಾವು

7

2 ವರ್ಷದಲ್ಲಿ 184 ಸಿಂಹಗಳ ಸಾವು

Published:
Updated:
2 ವರ್ಷದಲ್ಲಿ 184 ಸಿಂಹಗಳ ಸಾವು

ಅಹಮದಾಬಾದ್‌: ಗುಜರಾತ್‌ನಲ್ಲಿ ಎರಡು ವರ್ಷಗಳಲ್ಲಿ 184 ಸಿಂಹಗಳು ಸಾವನ್ನಪ್ಪಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ವಿವರಣೆ ಕೋರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

2016 ಮತ್ತು 2017ರಲ್ಲಿ 184 ಸಿಂಹಗಳು ಸಾವನ್ನಪ್ಪಿವೆ. ಇದರಲ್ಲಿ 34 ಸಿಂಹಗಳು ಅಸ್ವಾಭಾವಿಕ ಕಾರಣಗಳಿಂದಾಗಿ ಮೃತಪಟ್ಟಿವೆ ಎಂದು ಮಾರ್ಚ್ 5ರಂದು ವಿಧಾನಸಭೆಗೆ ಸರ್ಕಾರ ಮಾಹಿತಿ ನೀಡಿತ್ತು. ಪತ್ರಿಕೆಗಳಲ್ಲಿ ಪ್ರಕಟವಾದ ಈ ಮಾಹಿತಿ ಆಧರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಮುಖ್ಯನ್ಯಾಯಮೂರ್ತಿ ಆರ್‌ ಸುಭಾಷ್‌ ರೆಡ್ಡಿ ಮತ್ತು ನ್ಯಾಯಮೂರ್ತಿ ವಿ.ಎಂ. ಪಾಂಚೋಲಿ ನೇತೃತ್ವದ ಪೀಠ ಈ ಆದೇಶ ನೀಡಿದೆ.

ಇಷ್ಟೊಂದು ‍ಪ್ರಮಾಣದಲ್ಲಿ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳು ಹಾಗೂ ಅವುಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ತಿಳಿಸುವಂತೆ ಕೋರ್ಟ್‌ ಸೂಚಿಸಿದೆ.

ಏಷ್ಯಾ ಖಂಡದಲ್ಲಿಯೇ ಗುಜರಾತ್‌ ರಾಜ್ಯವು ಸಿಂಹಗಳ ಬೀಡು ಎಂದು ಹೆಸರುವಾಸಿ. 2015ರ ಗಣತಿ ಪ್ರಕಾರ 523 ಸಿಂಹಗಳು ಇಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry