ಕೋರ್ಟ್‌ ಆದೇಶ ಉಲ್ಲಂಘಿಸಿ ಶಶಿಕಲಾ ಪುಷ್ಪಾ, ರಾಮಸ್ವಾಮಿ ವಿವಾಹ

7

ಕೋರ್ಟ್‌ ಆದೇಶ ಉಲ್ಲಂಘಿಸಿ ಶಶಿಕಲಾ ಪುಷ್ಪಾ, ರಾಮಸ್ವಾಮಿ ವಿವಾಹ

Published:
Updated:

ಚೆನ್ನೈ: ವಕೀಲ ಡಾ.ಬಿ.ರಾಮಸ್ವಾಮಿ ಅವರು ಕೋರ್ಟ್‌ ಆದೇಶ ಉಲ್ಲಂಘಿಸಿ ಸೋಮವಾರ ದೆಹಲಿಯಲ್ಲಿ ಎಐಎಡಿಎಂಕೆ ಉಚ್ಛಾಟಿತ ಸಂಸದೆ ಶಶಿಕಲಾ ಪುಷ್ಪಾ ಅವರನ್ನು ಮದುವೆಯಾಗಿದ್ದಾರೆ.

ರಾಮಸ್ವಾಮಿ ಮೊದಲ ಪತ್ನಿ ಟಿ.ಸತ್ಯಪ್ರಿಯಾ ಕೋರ್ಟ್‌ ಮೆಟ್ಟಿಲೇರಿದ್ದು, ಮೊದಲ ಮದುವೆಗೆ ಇನ್ನೂ ಮಾನ್ಯತೆ ಇದೆ. ಅಧಿಕೃತವಾಗಿ ವಿಚ್ಛೇದನ ದೊರೆಯುವವರೆಗೂ ಮತ್ತೊಂದು ಮದುವೆ ಆಗಬಾರದು ಎಂದು ಕೌಟುಂಬಿಕ ನ್ಯಾಯಾಲಯ ರಾಮಸ್ವಾಮಿ ಅವರಿಗೆ ಆದೇಶಿಸಿತ್ತು. 

ಶಶಿಕಲಾ ಪುಷ್ಪಾ ಮತ್ತು ರಾಮಸ್ವಾಮಿ ಮದುವೆ ಆಹ್ವಾನ ಪತ್ರಿಕೆ ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ನಂತರ ಸತ್ಯಪ್ರಿಯಾ ಈ ಕುರಿತು ಜಿಲ್ಲಾಧಿಕಾರಿ ಬಳಿ ದೂರು ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry