29ಕ್ಕೆ ಮಹಾವೀರ ಜಯಂತಿ ಆಚರಣೆ

7

29ಕ್ಕೆ ಮಹಾವೀರ ಜಯಂತಿ ಆಚರಣೆ

Published:
Updated:
29ಕ್ಕೆ ಮಹಾವೀರ ಜಯಂತಿ ಆಚರಣೆ

ಬೆಂಗಳೂರು: ಜೈನ್ ಯುವ ಸಂಘಟನೆಯು ಭಗವಾನ್ ಮಹಾವೀರ ಅವರ 2,617ನೇ ಜನ್ಮಕಲ್ಯಾಣ ಮಹೋತ್ಸವವನ್ನು ಇದೇ 29ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಜೈನ್ ವಿನೋದ್ ನಂದಾವತ್, ‘ಕಾರ್ಯಕ್ರಮದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

‘ಅಹಿಂಸಾ ಹಾಗೂ ವಿಶ್ವಶಾಂತಿ ಜಾಥಾವನ್ನು ಬೆಳಿಗ್ಗೆ 8 ಗಂಟೆಗೆ ಪುರಭವನದ ಬಳಿ ಹಮ್ಮಿಕೊಳ್ಳಲಾಗಿದೆ. ಮೇಯರ್ ಆರ್.ಸಂಪತ್‌ರಾಜ್ ಜಾಥಾಗೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ನಗರ್ತಪೇಟೆ, ಚಿಕ್ಕಪೇಟೆ ಆದಿನಾಥ ಜೈನ ದೇವಸ್ಥಾನ, ಬಿವಿಕೆ ಅಯ್ಯಂಗಾರ್ ರಸ್ತೆ, ಹಾಸ್ಪಿಟಲ್ ರಸ್ತೆ, ಅವೆನ್ಯೂ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ, ವೈ.ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ ಮಾರ್ಗವಾಗಿ ಜಾಥಾವು ಸ್ವಾತಂತ್ರ್ಯ ಉದ್ಯಾನ ತಲುಪಲಿದೆ’ ಎಂದು ಮಾಹಿತಿ ನೀಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ್, ಜೈನ್ ಸಮುದಾಯದ ಉತ್ತಮಚಂದ್‌ಜಿ ಭಂಡಾರಿ, ಸುರೇಶಜಿ ಛಲ್ಲಾಣಿ ಭಾಗವಹಿಸಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry