ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿಸಿ

7

ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿಸಿ

Published:
Updated:
ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿಸಿ

ನಿಪ್ಪಾಣಿ: ‘ಬೆವರು ಸುರಿಸಿ ಬೆಳೆಯುವ ತಮ್ಮ ಬೆಳೆಗಳಿಗೆ ಯೋಗ್ಯ ಬೆಲೆ ಸಂಪಾದಿಸಲು ರೈತರು ರಕ್ತ ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಸರ್ಕಾರದ ತಪ್ಪು ಧೋರಣೆಗಳಿಂದಾಗಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಶೇತ್ಕರಿ ಸಂಘಟನೆ ಮುಖಂಡ ರಘುನಾಥ ಪಾಟೀಲ ದೂರಿದರು.

ಶೇತ್ಕರಿ ಸಂಘಟನೆಯಿಂದ ಸಾಂಗ್ಲಿಯಿಂದ ಆರಂಭಿಸಲಾದ ಶೇತ್ಕರಿ ಜಾಗೃತಿ ಯಾತ್ರೆಯು ಇಲ್ಲಿನ ಆಂದೋಲನನಗರದ ರೈತರ ಹುತಾತ್ಮ ಸ್ಮಾರಕದ ಬಳಿಗೆ ಸೋಮವಾರ ಆಗಮಿಸಿದ ಸಂದರ್ಭದಲ್ಲಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

‘ಸಾಲಮನ್ನಾ ಹೆಸರಿನಲ್ಲಿ ಬಡ ರೈತರನ್ನು ಅಪಹಾಸ್ಯ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ರೈತರ ಉತ್ಪನ್ನಗಳಿಗೆ ಸರ್ಕಾರವು ಯೋಗ್ಯ ಬೆಲೆ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಐ.ಎನ್‌. ಬೇಗ, ಸುಶೀಲಾ ಮುರಾಳೆ, ಕಿಶೋರ ಮಾನೆ ಮಾತನಾಡಿದರು. ತಂಬಾಕು ಆಂದೋಲನದಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖಂಡರಾದ ಚಂದ್ರಕಾಂತ ತಾರಳೆ, ಆನಂದ ಭಾಲೆಕರ, ಶಿವಾಜಿ ತಾಂದಳೆ, ವನಜಿಭಾಯಿ ಗಾಯಕವಾಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry