ಆಧಾರ್ ಅದಾಲತ್‌ ಸದುಪಯೋಗಕ್ಕೆ ಸಲಹೆ

7

ಆಧಾರ್ ಅದಾಲತ್‌ ಸದುಪಯೋಗಕ್ಕೆ ಸಲಹೆ

Published:
Updated:
ಆಧಾರ್ ಅದಾಲತ್‌ ಸದುಪಯೋಗಕ್ಕೆ ಸಲಹೆ

ಹುಮನಾಬಾದ್: ‘ಸಾರ್ವಜನಿಕರು ಆಧಾರ್‌ ತಿದ್ದುಪಡಿ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಗ್ರೇಡ್‌ (2) ತಹಶೀಲ್ದಾರ್‌ ಜಿಯಾವುದ್ದಿನ್‌ ಸಲಹೆ ನೀಡಿದರು.

ಇ–ಆಡಳಿತ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾ ಆಡಳಿತ ಸಂಯುಕ್ತವಾಗಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆರಂಭಿಸಿದ 5 ದಿನಗಳ ಆಧಾರ್‌ ಅದಾಲತ್‌ ಉದ್ಘಾಟಿಸಿ, ಅವರು ಮಾತನಾಡಿದರು.

‘ಕಾರಣಾಂತರಗಳಿಂದ ಆಧಾರ್‌ನಲ್ಲಿ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ನಮೂದಿನಲ್ಲಿ ಆಗಿರುವ ದೋಷ ಸರಿಪಡಿಸಿಕೊಳ್ಳದೇ ಸಾಕಷ್ಟು ಜನ ತೊಂದರೆ ಅನುಭವಿಸುತ್ತಿದ್ದಾರೆ. ಒಬ್ಬೊಬ್ಬರಿಗೆ ಪ್ರತ್ಯೇಕ ಅವಕಾಶ ಕಲ್ಪಿಸುವುದು ಕಷ್ಟಸಾಧ್ಯ ಎಂಬುದನ್ನು ಮನಗಂಡು ಸರ್ಕಾರ ವಿಶೇಷ ಸೌಲಭ್ಯ ಕಲ್ಪಿಸಿದೆ. ಸಾರ್ವಜನಿಕರು ಮಾರ್ಚ್‌ 31ರ ವರೆಗೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಬಂದು ಸಂಪೂರ್ಣ ಉಚಿತವಾಗಿ ತಿದ್ದುಪಡಿ ಮಾಡಿಕೊಳ್ಳಬಹುದು’ ಎಂದು ತಿಳಿಸಿದರು.

ತಹಶೀಲ್ದಾರ್ ಕಚೇರಿ ಸಿಬ್ಬಂದಿ ನೀಲಪ್ರಭಾ, ಪಲ್ಲವಿ, ಕರಿಮಸಾಬ್‌, ಆಧಾರ್‌ ಜಿಲ್ಲಾ ಸಮಾಲೋಚಕ ಅಮರ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry