ಅಧಿಕಾರಿಗಳ ವಿರುದ್ಧ 7 ದೂರು ಸಲ್ಲಿಕೆ

7

ಅಧಿಕಾರಿಗಳ ವಿರುದ್ಧ 7 ದೂರು ಸಲ್ಲಿಕೆ

Published:
Updated:
ಅಧಿಕಾರಿಗಳ ವಿರುದ್ಧ 7 ದೂರು ಸಲ್ಲಿಕೆ

ಕೊಳ್ಳೇಗಾಲ: ನಗರದಲ್ಲಿ ಲೋಕಾಯುಕ್ತ ಪೊಲೀಸರು ಸೋಮವಾರ ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಏಳು ದೂರುಗಳು ಸಲ್ಲಿಕೆಯಾದವು.

‘ಸರ್ವೇ ನಂಬರ್ 29 ರಲ್ಲಿ ನನ್ನ ಬಾಬ್ತು ಜಾಗಕ್ಕೆ ಸೇರಿದ ನಮೂನೆ 3 ಯನ್ನು ಕೋರಿದ್ದೇನೆ ಆದರೆ ನಗರಸಭೆ ಅಧಿಕಾರಿ ಮತ್ತು ಸಿಬಂದ್ದಿ ನೀಡುತ್ತಿಲ್ಲ’ ಎಂದು ಆರೋಪಿಸಿ ನಾಸೀರ್ ಖಾನ್ ಅವರು ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಬಿ.ಜಿ.ಕುಮಾರ್ ಅವರಿಗೆ ದೂರು ಸಲ್ಲಿಸಿದರು.

ತಾಲ್ಲೂಕಿನ ಪಾಳ್ಯ ಗ್ರಾಮದ ಮಂಜು ‘ನಾನು ನನ್ನ ಜಮೀನಿನಲ್ಲಿ ಸುಮಾರು 15 ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದೇನೆ ನಮ್ಮ ಜಮೀನಿನ ಪಕ್ಕದವರು ಗಂಗಾಕಲ್ಯಾಣ ಯೋಜನೆಯಲ್ಲಿ ವಿದ್ಯುತ್ ದೀಪವನ್ನು ಹಾಕಿಸಿಕೊಂಡಿದ್ದಾರೆ. ಆದರೆ, ಅವರು ಉದ್ದೇಶ ಪೂರಕವಾಗಿ ನನ್ನ ಜಮೀನಿನಲ್ಲಿ ವಿದ್ಯತ್ ಕಂಬಗಳನ್ನು ಅಕ್ರಮವಾಗಿ ಹಾಕಿದ್ದಾರೆ. ಈ ಬಗ್ಗೆ ಸೆಸ್ಕ್‌ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಕುಂದು ಕೊರತೆ ಆಲಿಸಿದ ಬಿ.ಜಿ.ಕುಮಾರ್, ಪರಿಹಾರಕ್ಕೆ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry