ಉರುಸ್: ಗಂಧದ ಮೆರವಣಿಗೆ

7

ಉರುಸ್: ಗಂಧದ ಮೆರವಣಿಗೆ

Published:
Updated:
ಉರುಸ್: ಗಂಧದ ಮೆರವಣಿಗೆ

ಗುಡಿಬಂಡೆ: ತಾಲ್ಲೂಕಿನ ಸೂಫಿ ಸಂತ ಹಜರತ್ ಸಯ್ಯದ್ ಗಂಜೆ ಷಾವಲಿ ಬಾಬಾ ಅವರ 54ನೇ ವರ್ಷದ ಉರುಸ್ ಪ್ರಯುಕ್ತ ಪಟ್ಟಣದ ಮುಖ್ಯಬೀದಿಯಲ್ಲಿ ಗಂಧದ ಮೆರವಣಿಗೆ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು.

ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಸೇರಿ ನಡೆಸುವ ಈ ಉರುಸ್ ಭಾವೈಕ್ಯದ ಸಂಕೇತವಾಗಿದೆ. ಪಟ್ಟಣದ ಖಾಜೀಪೇಟೆಯ ಇಮಾನ್ ಸಾಬ್ (ಮುನಾವರ್) ಮನೆಯಿಂದ ಗಂಧದ ಪೂಜಿಸಿ ಲೇಪಿಸಿಕೊಂಡ ನಂತರ ಸಿಹಿ ವಿತರಿಸಲಾಯಿತು.

ಅಲಂಕೃತ ವಾಹನದಲ್ಲಿ ಗಂಧವನ್ನು ಮೆರವಣಿಗೆ ಮೂಲಕ ಮುಖ್ಯರಸ್ತೆಗಳಲ್ಲಿ ಸಂಚರಿಸಿತು. ಕುರಾನ್ ಪಠಣ, ಗೀತಗಾಯನ, ಬ್ಯಾಂಡ್ ಮೇಳ, ಫಕೀರರ ಖಂಜರ ನಾದ ಹಾಗೂ ಪವಾಡ ಪ್ರದರ್ಶನ ಉತ್ಸವಕ್ಕೆ ಮೆರಗು ತಂದಿದ್ದವು.

ದರ್ಗಾವನ್ನು ವಿದ್ಯುತ್ ದೀಪ ದಿಂದ ಅಲಂಕರಿಸಲಾಗಿತ್ತು. ದರ್ಗಾ ಮೈದಾನದಲ್ಲಿ ಜಾತ್ರೆ ಆಯೋಜಿಸಲಾಗಿತ್ತು.

ಉರುಸ್ ಆಚರಣಾ ಸಮಿತಿಯ ಅಧ್ಯಕ್ಷ ಹಿದಾಯತ್ ಉಲ್ಲಾ, ಪಟ್ಟಣ ಪಂಚಾಯಿತಿ ಸದಸ್ಯ ಅಪ್ಸರ್ ಪಾಷಾ, ಉರುಸ್ ಆಚರಣಾ ಸಮಿತಿಯ ಉಪಾಧ್ಯಕ್ಷ ಹಸೇನ್, ಗೌರವಾಧ್ಯಕ್ಷ ನಯಾಜ್ ಪಾಷಾ, ಕಾರ್ಯದರ್ಶಿ ಸುಭಾನ್, ಖಜಾಂಚಿ ಹಸೇನ್ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry