ಈ ಬಾರಿಯೂ ನಾನೇ ಸ್ಪರ್ಧಿಸುವೆ: ಶಾಸಕ ಶಾಮನೂರು ಶಿವಶಂಕರಪ್ಪ

7

ಈ ಬಾರಿಯೂ ನಾನೇ ಸ್ಪರ್ಧಿಸುವೆ: ಶಾಸಕ ಶಾಮನೂರು ಶಿವಶಂಕರಪ್ಪ

Published:
Updated:

ದಾವಣಗೆರೆ: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ನಗರದ ಜಾಲಗಾರ ಓಣಿಯ ಸುಮಾರು 200 ನಿವಾಸಿಗಳಿಗೆ ಸೋಮವಾರ ಹಕ್ಕುಪತ್ರ ವಿತರಿಸಿ ನಂತರ ಅವರು ಮಾತನಾಡಿದರು.

‘ಮತ್ತೊಮ್ಮೆ ನಾನೇ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ನನ್ನ ಕೆಲಸ ಹಾಗೂ ನಮ್ಮ ಸರ್ಕಾರದ ಸಾಧನೆಯನ್ನು ನೋಡಿ ನಮ್ಮನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಎಚ್.ಬಿ.ಗೋಣೆಪ್ಪ, ಬಿ.ಎಂ.ಈಶ್ವರ್, ಸೌಭಾಗ್ಯ ಬಂಡಿ ನಾಗರಾಜ್, ಗೋವಿಂದನಾಯ್ಕ, ಇಟ್ಟಿಗುಡಿ ಮಂಜುನಾಥ, ದುಗ್ಗೇಶಿ, ಮಂಜುನಾಥ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry