ಕೆವಿಜಿ ಬ್ಯಾಂಕ್ ಸಿಬ್ಬಂದಿ ಧರಣಿ

7

ಕೆವಿಜಿ ಬ್ಯಾಂಕ್ ಸಿಬ್ಬಂದಿ ಧರಣಿ

Published:
Updated:

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಆರ್ಆರ್‌ ಬಿಇಎ ಮತ್ತು ಎಐಆರ್ಆರ್‌ಬಿಒಎ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ಪಾಲ್ಗೊಂಡ ಕಾರಣ ಬ್ಯಾಂಕ್‌ನ ಹಲವು ಶಾಖೆಗಳಲ್ಲಿ ಸೋಮವಾರ ವಹಿವಾಟು ವ್ಯತ್ಯಯಗೊಂಡಿತು.

ಜಿಲ್ಲೆಯ ಒಟ್ಟು 79 ಶಾಖೆಗಳ ಪೈಕಿ 9 ಬೀಗ ಹಾಕಿದರ, 14ರಲ್ಲಿ ವಹಿವಾಟು ನಡೆಯಲಿಲ್ಲ. ಉಳಿದಂತೆ ಶಾಖೆಗಳು ಕಾರ್ಯ ನಿರ್ವಹಿಸಿದವು ಎಂದು ಮೂಲಗಳು ತಿಳಿಸಿವೆ.

ಪಿಂಚಣಿ, ಬ್ಯಾಂಕ್ ಖಾಸಗೀಕರಣ, ಅನುಕಂಪ ಆಧಾರಿತ ನೌಕರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಧರಣಿ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry