ಕುಡಿವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ: ಶಾಸಕ ಸೈಲ್

7

ಕುಡಿವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ: ಶಾಸಕ ಸೈಲ್

Published:
Updated:
ಕುಡಿವ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ: ಶಾಸಕ ಸೈಲ್

ಅಂಕೋಲಾ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಬೇಳಾ ಸುತ್ತ ಮುತ್ತಲಿನ ಪ್ರಮುಖ ಸಮಸ್ಯೆಯಾದ ಕುಡಿವ ನೀರಿನ ಸಮಸ್ಯೆ ಶೀಘ್ರವೇ  ಬಗೆಹರಿಸಲಾಗುವುದು ಎಂದು ಶಾಸಕ ಸತೀಶ್ ಸೈಲ್ ಭರವಸೆ ನೀಡಿದರು.

ಇಲ್ಲಿಯ ಬೇಳಾ ಬಂದರಿನ ವೀರಭದ್ರೇಶ್ವರ ದೇವಸ್ಥಾನದ ಬಳಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಮುದಾಯ ಭವನಕ್ಕೆ ಸೋಮವಾರ  ಭೂಮಿಪೂಜೆ ನೆರವೇರಿಸಿ  ಅವರು ಮಾತನಾಡಿದರು. ವಕೀಲ ಉಮೇಶ್ ನಾಯ್ಕ ಮಾತನಾಡಿ, ‘ಈ ಭಾಗ ದಲ್ಲಿ ಸ್ವಸಹಾಯ ಸಂಘಗಳ  ಸದಸ್ಯೆಯರು  ವಾರದ ಸಭೆ ನಡೆ ಸಲು  ಸ್ಥಳಾಭಾವದಿಂದ  ಅಲೆ ದಾಡುತ್ತಿದ್ದರು. ಈ ಸಮುದಾಯ ಭವನ ನಿರ್ಮಾಣವಾದರೆ ಸಮಸ್ಯೆ ಬಗೆಹರಿಯಲಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಗಾಂವಕರ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ನಾಯ್ಕ, ಸದಸ್ಯೆ ಶಾಂತಿ ಆಗೇರ, ಗ್ರಾಮ ಪಂಚಾಯ್ತಿ ಸದಸ್ಯರಾದ ದೇವಿದಾಸ ನಾಯ್ಕ, ಗಜು ನಾಯ್ಕ, ಸೌಭಾಗ್ಯಾ ಬಂಟ, ರಾಜೇಶ ಮಿತ್ರಾ ನಾಯ್ಕ, ಪ್ರಮುಖರಾದ ವಿನೋದ್ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಅನಿಲ್ ನಾಯ್ಕ, ರಾಮಾ ನಾಯ್ಕ, ಮಾದೇವ ಮಾಸ್ತರ, ಪಾಂಡುರಂಗ ನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry