‘ದೇವೇಗೌಡರ ಕುಟುಂಬ ಒಡೆಯುವ ಕೆಲಸ ಮಾಡುವುದಿಲ್ಲ’

7

‘ದೇವೇಗೌಡರ ಕುಟುಂಬ ಒಡೆಯುವ ಕೆಲಸ ಮಾಡುವುದಿಲ್ಲ’

Published:
Updated:

ಮಂಡ್ಯ: ‘ಎಚ್‌.ಡಿ.ದೇವೇಗೌಡರ ಕುಟುಂಬದ ಕುರಿತು ಏನನ್ನೂ ಮಾತನಾಡುವುದಿಲ್ಲ. ಅವರ ಕುಟುಂಬ ಒಡೆಯುವ ಕೆಲಸವನ್ನು ಮಾಡುವುದಿಲ್ಲ’ ಎಂದು ಕಾಂಗ್ರೆಸ್‌ ಸೇರಿರುವ ಮಾಜಿ ಶಾಸಕ ಎನ್‌.ಚಲುವರಾಯಸ್ವಾಮಿ ಹೇಳಿದರು.

ನಗರದ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದಲ್ಲಿ ಸೋಮವಾರ ವೈರಮುಡಿ ತಿರುವಾಭರಣಗಳಿಗೆ ನಡೆದ ಪ್ರಥಮ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ಯಾವುದೇ ನಾಯಕರ ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ರಾಜಕೀಯವಾಗಿ ಏನೇ ಮಾತನಾಡಿದರೂ ಅದನ್ನು ಮೀರಿ ನಾನು ಎಂದಿಗೂ ಮಾತನಾಡಿಲ್ಲ’ ಎಂದರು.

ನಿನ್ನೆಯಷ್ಟೇ ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ನೆಲೆ ಗಟ್ಟಿಗೊಳಿಸಲು ಒಗ್ಗಟ್ಟಿನಿಂದ ಕೆಲಸಮಾಡುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry