ನದಿಯಲ್ಲಿ ಮುಳುಗಿ ಯುವಕ ಸಾವು

7

ನದಿಯಲ್ಲಿ ಮುಳುಗಿ ಯುವಕ ಸಾವು

Published:
Updated:

ಮಂಗಳೂರು: ನಗರದ ಜೆಪ್ಪಿನಮೊಗರು ಬಳಿ ಭಾನುವಾರ ಸಂಜೆ ಸ್ನಾನ ಮಾಡಲು ನೇತ್ರಾವತಿ ನದಿಗೆ ಇಳಿದಿದ್ದ ಮೂಡುಬಿದಿರೆ ನಿವಾಸಿ ಜೋಯಲ್‌ (23) ಎಂಬ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾಗದೇ ಮುಳುಗಿ ಮೃತಪಟ್ಟಿದ್ದಾನೆ.

ಜೋಯಲ್‌ ಮತ್ತು ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಮುಡು ಗೋಪಾಡಿ ನಿವಾಸಿ ಸಚಿನ್‌ (23), ಮಂಗಳೂರಿನ ನಂದಿಗುಡ್ಡೆ ಮಾರ್ನ ಮಿಕಟ್ಟೆ ನಿವಾಸಿ ರಘು (26) ಮತ್ತು ಅತ್ತಾವರದ ಜೈನ್‌ ಕಾಂಪೌಂಡ್‌ ನಿವಾಸಿ ಗೌರವ್‌ (24) ಒಟ್ಟಾಗಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನೇತ್ರಾವತಿ ನದಿಯಲ್ಲಿ ಗಾಳಹಾಕಿ ಮೀನು ಹಿಡಿಯಲು ಹೋಗಿದ್ದರು.

ಸಂಜೆ 4.30ರ ಸುಮಾರಿಗೆ ಸ್ನಾನ ಮಾಡುವುದಕ್ಕಾಗಿ ರಘು ಮತ್ತು ಜೋಯಲ್‌ ನದಿಗೆ ಇಳಿದಿದ್ದರು. ರಘು ಈಜಾಡಿ ಮೇಲಕ್ಕೆ ಬಂದಿದ್ದ. ಜೋಯಲ್‌ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆ ಶೋಧಕಾರ್ಯ ನಡೆಸಿ ದರೂ ಪತ್ತೆಯಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ ಎಂದು ಕಂಕನಾಡಿ ನಗರ ಠಾಣೆ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry