ಫಲಾನುಭವಿ ಆಯ್ಕೆಯಲ್ಲಿ ರಾಜಕೀಯ: ಲಿಂಗಪ್ಪ ಕಿಡಿ

7

ಫಲಾನುಭವಿ ಆಯ್ಕೆಯಲ್ಲಿ ರಾಜಕೀಯ: ಲಿಂಗಪ್ಪ ಕಿಡಿ

Published:
Updated:

ರಾಮನಗರ: ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಮಾಡಿದಲ್ಲಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪತ್ರ ಬರೆದು ಆಯ್ಕೆಪಟ್ಟಿ ಮರುಪಶೀಲನೆ ಮಾಡಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಎಚ್ಚರಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ವಸತಿ ಯೋಜನೆ ಅನುಷ್ಠಾನ ಸಂಬಂಧ ನಡೆದ ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ವಿಧಾನ ಪರಿಷತ್ ಖೋಟಾದಡಿ ರಾಮನಗರ ವಿಧಾನಸಭೆ ಕ್ಷೇತ್ರ ಮತ್ತು ಮಾಗಡಿಯ ಕೂಟಗಲ್ ಮತ್ತು ಬಿಡದಿಗಾಗಿ ಒಟ್ಟು 560 ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದೇನೆ. ಆದರೆ ನಾನು ನೀಡಿರುವ ಪಟ್ಟಿಯನ್ನು ಪರಿಗಣಿಸದೇ ಒಂದೊಂದು ಪಕ್ಷಕ್ಕೆ ಇಂತಿಷ್ಟು ಎಂದು ಹಂಚಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಇದಕ್ಕೆ ಅವಕಾಶ ನೀಡದೇ ಅರ್ಹರಿಗೆ ನೀಡಬೇಕು. ಒತ್ತಡಕ್ಕೆ ಒಳಗಾಗಿ ಹೆಸರು ಕೈಬಿಟ್ಟಿದ್ದೇ ಆದಲ್ಲಿ ಅದಕ್ಕೆ ಸ್ಪಷ್ಟ ಕಾರಣ ನೀಡಬೇಕು’ ಎಂದು ಅವರು ಸೂಚನೆ ನೀಡಿದರು.

‘ಸೂರು ಇಲ್ಲದವರಿಗೆ ಸೂರು ಕಲ್ಪಿಸುವ ಕೆಲಸ ಆಗಬೇಕು. ಮತ ನೀಡುತ್ತಾರೆ ಎನ್ನುವ ಕಾರಣಕ್ಕೆ ಮನೆ ನೀಡುವುಡು ಬೇಡ. ಕುಡಿಯುವ ನೀರು ಪೂರೈಕೆ ವಿಷಯದಲ್ಲಿಯೂ ರಾಜಕೀಯ ಮಾಡಬೇಡಿ’ ಎಂದು ಹೇಳಿದರು.

‘ಕನಕಪುರವು ನರೇಗಾ ಅನುದಾನ ಬಳಕೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದೆ, ಆದರೆ ಪಕ್ಕದ ರಾಮನಗರದಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಲಿಂಗಪ್ಪ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿಗಳು ಎಲ್ಲ ಒತ್ತಡಗಳನ್ನೂ ಮೀರಿ ಜನರ ಅನುಕೂಲಕ್ಕಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಆಶ್ರಯ ಸಮಿತಿ ಸದಸ್ಯ ಗಾಣಕಲ್ ನಟರಾಜ್, ತಾಪಂ ಇಓ ಬಾಬು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry