ಫೇಸ್‌ಬುಕ್‌ ಖಾತೆ ಸ್ಥಗಿತಗೊಳಿಸಿದ ಚಿತ್ರನಟ ಫರ್ಹಾನ್‌ ಅಕ್ತರ್‌

7

ಫೇಸ್‌ಬುಕ್‌ ಖಾತೆ ಸ್ಥಗಿತಗೊಳಿಸಿದ ಚಿತ್ರನಟ ಫರ್ಹಾನ್‌ ಅಕ್ತರ್‌

Published:
Updated:
ಫೇಸ್‌ಬುಕ್‌ ಖಾತೆ ಸ್ಥಗಿತಗೊಳಿಸಿದ ಚಿತ್ರನಟ ಫರ್ಹಾನ್‌ ಅಕ್ತರ್‌

ನವದೆಹಲಿ: ಭಾಗ್‌ ಮಿಲ್ಕಾ ಭಾಗ್ ಹಾಗೂ ಜಿಂದಗಿ ನಾ ಮಿಲೇಗಿ ದುಬಾರ ಚಿತ್ರಗಳಿಂದ ಸಿನಿಪ್ರಿಯರಿಗೆ ಹತ್ತಿರವಾಗಿದ್ದ ಫರ್ಹಾನ್‌ ಅಕ್ತರ್‌ ಈಗ ಫೇಸ್‌ಬುಕ್‌ನಿಂದ ದೂರವಾಗಿದ್ದಾರೆ.

ಫರ್ಹಾನ್‌ ಅಕ್ತರ್‌ ತಮ್ಮ ಫೇಸ್‌ಬುಕ್‌ ಖಾತೆಯನ್ನು ಡಿಲೀಟ್‌ ಮಾಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಅವರು, ‘ಫರ್ಹಾನ್‌ ಅಕ್ತರ್‌ ಲೈವ್‌’ ಫೇಜ್‌ ಚಾಲ್ತಿಯಲ್ಲಿ ಇರಲಿದೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದಿಂದ ದೂರವಾಗುತ್ತಿರುವುದಕ್ಕೆ ಅವರು ನಿಖರವಾದ ಕಾರಣವಂತು ನೀಡಿಲ್ಲ.

ಕೆಂಬ್ರಿಜ್‌ ಅನಾಲಿಟಿಕಾ ಕಂಪೆನಿಯು ಸುಮಾರು 5 ಕೋಟಿ ಫೇಸ್‌ಬುಕ್‌ ಖಾತೆದಾರರ ಮಾಹಿತಿಯನ್ನು ಕದ್ದು ನಿರ್ದಿಷ್ಟ ರಾಜಕೀಯ ನಾಯಕರ ಮೇಲೆ ಒಲವು ಹೆಚ್ಚಾಗುವಂತೆ ಮಾಡಿತು ಎಂಬ ಪ್ರಕರಣ ಇತ್ತೀಚೆಗೆ ಹೊರಬಿದ್ದಿದ್ದು. ಅಕ್ತರ್‌ ಅವರ ಈ ನಿರ್ಧಾರಕ್ಕೆ ಆ ಪ್ರಕರಣ ಕಾರಣವಾಗಿರಬಹುದು ಎಂಬ ಮಾತು ಕೇಳಿಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry