ಕಾರ್ಮಿಕನಿಗೆ ಸಂಬಳ ನೀಡದ ಆಸ್ಕರ್‌!

7

ಕಾರ್ಮಿಕನಿಗೆ ಸಂಬಳ ನೀಡದ ಆಸ್ಕರ್‌!

Published:
Updated:

ಉಡುಪಿ: ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ವರ್ಕ್‌ಶಾಪ್ ಮತ್ತು ಕಚೇರಿಯಲ್ಲಿ ಕೆಲಸ ಮಾಡಿದ ಎ.ಗೋಪಾಲ ಪೂಜಾರಿ ಅವರಿಗೆ 15 ವರ್ಷದ ವೇತನ ಪಾವತಿಯಾಗಿಲ್ಲ!

ಸ್ವತಃ ಗೋಪಾಲ ಪೂಜಾರಿ ಅವರು ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಅಳಲು ತೋಡಿಕೊಂಡರು. ಬಾಕಿ ಪಾವತಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏ.2ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅವರು ಹೇಳಿದರು.

‘ಅವರು ಆರೋಪ ಮಾಡುತ್ತಿರುವುದು ಇದು ಮೊದಲೇನಲ್ಲ’ ಎಂದು ಆಸ್ಕರ್ ಫರ್ನಾಂಡಿಸ್ ಆಪ್ತ ಕಾರ್ಯದರ್ಶಿ ನಾಗೇಶ್ ಉದ್ಯಾವರ ಹೇಳಿದ್ದಾರೆ.

**

ಇದೊಂದು ನಾನ್‌ಸೆನ್ಸ್, ಅವರು ಆರೋಪ ಮಾಡುತ್ತಿರುವುದು ಇದು ಮೊದಲೇನಲ್ಲ, ಚುನಾವಣೆ ಬಂದಾಗ ಇಂತಹ ಆರೋಪ ಮಾಡುತ್ತಾರೆ.

–ನಾಗೇಶ್ ಉದ್ಯಾವರ, ಆಸ್ಕರ್ ಫರ್ನಾಂಡಿಸ್ ಆಪ್ತ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry