ಗ್ರಾಮೀಣ ಬ್ಯಾಂಕ್ ಖಾಸಗೀಕರಣ ಖಂಡಿಸಿ ಧರಣಿ

4

ಗ್ರಾಮೀಣ ಬ್ಯಾಂಕ್ ಖಾಸಗೀಕರಣ ಖಂಡಿಸಿ ಧರಣಿ

Published:
Updated:
ಗ್ರಾಮೀಣ ಬ್ಯಾಂಕ್ ಖಾಸಗೀಕರಣ ಖಂಡಿಸಿ ಧರಣಿ

ಯಾದಗಿರಿ: ಗ್ರಾಮೀಣ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಬಾರದು ಎಂದು ಒತ್ತಾಯಿಸಿ ನಗರದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಎದುರು ಸೋಮವಾರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಧರಣಿ ಆರಂಭಿಸಿದರು.

‘ಪ್ರೇರಕ ಬ್ಯಾಂಕಿನಲ್ಲಿರುವ ನಿವೃತ್ತಿ ಯೋಜನೆಯನ್ನು ಗ್ರಾಮೀಣ ಬ್ಯಾಂಕ್‌ಗಳ ನೌಕರರಿಗೂ ವಿಸ್ತರಿಸಬೇಕು. ಪ್ರೇರಕ ಬ್ಯಾಂಕಿನ ಸೇವಾ ನಿಯಮಗಳ ಮತ್ತು ನೇರ ನೇಮಕಾತಿ, ಬಡ್ತಿ ಯೋಜನೆಯನ್ನು ಜಾರಿಗೊಳಿಸಬೇಕು. ಕಂಪ್ಯೂಟರ್ ಇಂಕ್ರಿಮೆಂಟ್ ನೀಡ ಬೇಕು. ಅನುಕಂಪ ಆಧಾರಿತ ನೇಮಕಾತಿ ಜಾರಿಗೊಳಿಸಬೇಕು. ಗ್ರಾಮೀಣ ಬ್ಯಾಂಕುಗಳಲ್ಲಿರುವ ಗುತ್ತಿಗೆ ಆಧಾರಿತ ನೌಕರರನ್ನು ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.

ಅನೀಲ್‌ಕುಮಾರ್ ಕುಲಕರ್ಣಿ, ವರುಣಕುಮಾರ, ಎಚ್.ಎಸ್. ಮುಲ್ಲಾ, ಶರಣಗೌಡ ಬಿರಾದರ್, ಎಸ್.ಎಂ.ನೀಲಂಗಿ, ಎನ್‌.ಎಸ್.ಬಳಿಗಾರ್, ಪ್ರಶಾಂತ ದಂಡು, ಎಸ್.ಜಿ.ದೇಶಪಾಂಡೆ, ಅರುಣಕುಮಾರ ಧರಣಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry