ವಾರ್ತಾ ವಾಚಕಿಯಾಗಿ ಲಿಂಗ ಪರಿವರ್ತಿತೆ ನೇಮಕ

7

ವಾರ್ತಾ ವಾಚಕಿಯಾಗಿ ಲಿಂಗ ಪರಿವರ್ತಿತೆ ನೇಮಕ

Published:
Updated:
ವಾರ್ತಾ ವಾಚಕಿಯಾಗಿ ಲಿಂಗ ಪರಿವರ್ತಿತೆ ನೇಮಕ

ಕರಾಚಿ, ಪಾಕಿಸ್ತಾನ :  ಲಿಂಗ ಪರಿವರ್ತಿಸಿಕೊಂಡಿರುವ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಸುದ್ದಿ ವಾಚಕಿಯಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಫ್ಯಾಷನ್‌ ಷೋನಲ್ಲಿ ಕ್ಯಾಟ್‌ವಾಕ್‌ ಮಾಡುವ ಮೂಲಕ ಗಮನ ಸೆಳೆದಿದ್ದ ಮಾರ್ವಿಯಾ ಮಲಿಕ್‌ (21) ಈಗ ‘ಕೊಹಿನೂರ್‌’ ಸುದ್ದಿ ವಾಹಿನಿಯ ವಾರ್ತಾ ವಾಚಕಿಯಾಗಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಮಾರ್ವಿಯಾ, ‘ನನಗೆ ಖುಷಿಯಾಗುತ್ತಿದೆ. ಸಾಧನೆ ಮಾಡಬೇಕಿರುವುದು ಬಹಳಷ್ಟು ಇದೆ’ ಎಂದಿದ್ದಾರೆ. ಮಾಡೆಲಿಂಗ್ ಮಾಡಲು ಅವಕಾಶ ಬಂದರೂ ಮಾಧ್ಯಮ ವಲಯದಲ್ಲಿ ಇತಿಹಾಸ ಸೃಷ್ಟಿಸಲು ಬಯಸಿರುವುದಾಗಿ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry