ಶಿಕ್ಷಕರ ತರಬೇತಿ: ಹೊಸ ಸಂಸ್ಥೆಗಳಿಗೆ ಅನುಮತಿ ಇಲ್ಲ

7

ಶಿಕ್ಷಕರ ತರಬೇತಿ: ಹೊಸ ಸಂಸ್ಥೆಗಳಿಗೆ ಅನುಮತಿ ಇಲ್ಲ

Published:
Updated:

ನವದೆಹಲಿ: 2019–20ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು ಕೋರ್ಸ್‌ಗಳನ್ನು ಆರಂಭಿಸಲು ಯಾವುದೇ ಅನುಮತಿ ನೀಡದಿರಲು ಶಿಕ್ಷಕರ ಶಿಕ್ಷಣ ಮತ್ತು ರಾಷ್ಟ್ರೀಯ ಮಂಡಳಿ (ಎನ್‌ಸಿಟಿಇ) ನಿರ್ಧರಿಸಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಐದು ವರ್ಷಗಳ ಸಂಯೋಜಿತ ಬಿ.ಇಡಿ ಕೋರ್ಸ್‌ ಆರಂಭಿಸುವಲ್ಲಿನ ತೊಡಕುಗಳು ಮತ್ತು ಇತರೆ ಸಮಸ್ಯೆಗಳ ಕಾರಣ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಹೊಸ ತರಬೇತಿ ಸಂಸ್ಥೆಗಳು ಮತ್ತು ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡುವುದನ್ನು ಒಂದು ವರ್ಷದ ಮಟ್ಟಿಗೆ ತಡೆಹಿಡಿಯಲು ಮಂಡಳಿ ತೀರ್ಮಾನಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry