ಅತ್ಯಾಚಾರ ಪ್ರಕರಣ ಹೆಚ್ಚಳ

7

ಅತ್ಯಾಚಾರ ಪ್ರಕರಣ ಹೆಚ್ಚಳ

Published:
Updated:
ಅತ್ಯಾಚಾರ ಪ್ರಕರಣ ಹೆಚ್ಚಳ

ಮುಂಬೈ: ಮುಂಬೈನಲ್ಲಿ ನಡೆದ ಒಟ್ಟು ಅತ್ಯಾಚಾರ ಪ್ರಕರಣಗಳ ಪೈಕಿ ಶೇಕಡ 72ರಷ್ಟು 18 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲಿನವು ಎಂಬ ಅಂಶ ಆಘಾತವನ್ನುಂಟು ಮಾಡಿದೆ.

ರಾಜಕೀಯೇತರ ಸಂಘಟನೆ ‘ಪ್ರಜಾ ಫೌಂಡೇಷನ್‌’, ಈ ಕುರಿತ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

2016ರಲ್ಲಿ ಒಟ್ಟು 628 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 455 ಪ್ರಕರಣಗಳು 18 ವರ್ಷದೊಳಗಿನ ಹೆಣ್ಣುಮಕ್ಕಳ ಮೇಲಿನವು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರೂ, ಶಿಕ್ಷೆಯ ಪ್ರಮಾಣ ಮಾತ್ರ ಕಡಿಮೆಯಾಗಿದೆ ಎಂದು ಸಂಘಟನೆಯ ಯೋಜನಾ ನಿರ್ದೇಶಕಿ ಮಿಲಿಂದ್‌ ಮಹಸ್ಕೆ ತಿಳಿಸಿದ್ದಾರೆ.

ಸಂಘಟನೆಯು 1326 ಪ್ರಕರಣಗಳ ಗಂಭೀರ ಅಧ್ಯಯನ ನಡೆಸಿತು. 911 ಪ್ರಕರಣಗಳಲ್ಲಿ ಅಪರಾಧ ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿರುವುದು ಕಂಡುಬಂದಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry