ಕಡಲ ಒಡಲು ಸೇರಿದ ಹಡಗು

7

ಕಡಲ ಒಡಲು ಸೇರಿದ ಹಡಗು

Published:
Updated:
ಕಡಲ ಒಡಲು ಸೇರಿದ ಹಡಗು

ಕೊಲಂಬೊ: ಎಲ್‌ಟಿಟಿಇ ಸಂಘಟನೆಯ ಮುಖಂಡರು ಬಳಸುತ್ತಿದ್ದ ಹಡಗು ಹಾಗೂ ದೇಶದ ಅಧ್ಯಕ್ಷರು ಬಳಸುತ್ತಿದ್ದ ಬುಲೆಟ್‌ ಪ್ರೂಫ್‌ ವಾಹನಗಳನ್ನು ಶ್ರೀಲಂಕಾ ನೌಕಾಸೇನೆಯು ಸಮುದ್ರದಲ್ಲಿ ಮುಳುಗಿಸಿದೆ.

ಎಲ್‌ಟಿಟಿಇಯ ಮಾಜಿ ಉಪನಾಯಕ ಹಾಗೂ ರಾಜಕಾರಣಿ ವಿನಯಗಮೂರ್ತಿ ಮುರಳೀಧರನ್‌ ಅವರ ಬಳಸಿದ್ದ ವಾಹನಗಳನ್ನು ಪಶ್ಚಿಮ ಕರಾವಳಿಯ ಆಳಭಾಗದಲ್ಲಿ ಸೋಮವಾರ ಬೆಳಿಗ್ಗೆ ಮುಳುಗಿಸಲಾಯಿತು ಎಂದು ತಿಳಿಸಿದೆ.

ದೇಶದ ಮಾಜಿ ಅಧ್ಯಕ್ಷರಾದ ಜ್ಯೂನಿಯರ್‌ ಜಯವರ್ಧನೆ, ರಣಸಿಂಘೆ ಪ್ರೇಮದಾಸ, ಚಂದ್ರಿಕಾ ಕುಮಾರತುಂಗಾ, ಹಾಗೂ ಮಹಿಂದಾ ರಾಜಪಕ್ಷಾ ಅವರು ಬಳಸಿದ್ದ ಬುಲೆಟ್‌ಪ್ರೂಫ್‌ ವಾಹನಗಳನ್ನು ಬಿಚ್ಚಿ, ನಂತರ ಮುಳುಗಿಸಲಾಯಿತು ಎಂದು ತಿಳಿಸಿದೆ.

‘ಈ ವಾಹನಗಳನ್ನು ಸಾರ್ವಜನಿಕವಾಗಿ ಹರಾಜು ನಡೆಸಿದ್ದರೆ, ಅದನ್ನು ಖರೀದಿಸಿ ಕೆಲವರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಈ ಕಾರಣದಿಂದ ಯಾರಿಗೂ ಸಿಗದಂತೆ ನಾಶಮಾಡಿದ್ದೇವೆ’ ಎಂದು ನೌಕಾಸೇನೆಯು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry