ಭಾರತಕ್ಕೆ ಸೋಲು

6

ಭಾರತಕ್ಕೆ ಸೋಲು

Published:
Updated:
ಭಾರತಕ್ಕೆ ಸೋಲು

ಬಿಷಕೆಕ್‌: ಭಾರತ ತಂಡದವರು ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಏಷ್ಯಾಕಪ್‌ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ.

ಮಂಗಳವಾರ ನಡೆದ ‘ಎ’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಆತಿಥೇಯ ಕಿರ್ಗಿಸ್ತಾನ 2–1 ಗೋಲುಗಳಿಂದ ಪ್ರವಾಸಿ ಪಡೆಯನ್ನು ಸೋಲಿಸಿತು.

2017ರ ಜೂನ್‌ 13ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಉಭಯ ತಂಡಗಳು ಎದುರಾಗಿದ್ದವು. ಆಗ ಭಾರತ 1–0 ಗೋಲಿನಿಂದ ಗೆದ್ದಿತ್ತು. ಹಿಂದಿನ ಈ ಸೋಲಿಗೆ ಕಿರ್ಗಿಸ್ತಾನ ಮುಯ್ಯಿ ತೀರಿಸಿಕೊಂಡಿತು.

ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಅಂಗಳಕ್ಕಿಳಿದಿದ್ದ ಕಿರ್ಗಿಸ್ತಾನ ತಂಡ ಎರಡನೇ ನಿಮಿಷದಲ್ಲಿ ಖಾತೆ ತೆರೆಯಿತು. ಆ್ಯಂಟನ್‌ ಜೆಮ್ಲಿಯಾನುಖಿನ್‌ ಚೆಂಡನ್ನು ಗುರಿ ಮುಟ್ಟಿಸಿದರು.

ನಂತರ ಭಾರತ ತಂಡ ಸಮಬಲದ ಗೋಲಿಗಾಗಿ ನಿರಂತರವಾಗಿ ಪ್ರಯತ್ನಿಸಿತು. ಆದರೆ ಯಶಸ್ಸು ಸಿಗಲಿಲ್ಲ. ದ್ವಿತೀಯಾರ್ಧದಲ್ಲಿ ಕಿರ್ಗಿಸ್ತಾನ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. 72ನೇ ನಿಮಿಷದಲ್ಲಿ ಈ ತಂಡದ ಮಿರ್ಲಾನ್‌ ಮುರ್ಜಾಯೆವಾ ಗೋಲು ಬಾರಿಸಿ 2–0ರ ಮುನ್ನಡೆ ತಂದುಕೊಟ್ಟರು.

88ನೇ ನಿಮಿಷದಲ್ಲಿ ಜೆಜೆ ಲಾಲ್‌ಪೆಕ್ಲುವಾ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಭಾರತ, ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry