7

ಕುತ್ತಿಗೆಗೆ ಚಾಕು ಇಟ್ಟು ಸುಲಿಗೆ

Published:
Updated:

ಬೆಂಗಳೂರು: ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳನ್ನು ಅಡ್ಡಗಟ್ಟಿದ ನಾಲ್ವರು ಮುಸುಕುಧಾರಿಗಳು, ಮಾರಕಾಸ್ತ್ರಗಳಿಂದ ಬೆದರಿಸಿ ಹಣ ಹಾಗೂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಬೇಗೂರು ರಸ್ತೆಯ ಎನ್‌. ಪ್ರಶಾಂತ್ ಹಾಗೂ ಪ್ರವೀಣ್ ಶರ್ಮಾ ಹೈಗ್ರೌಂಡ್ಸ್‌ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಕೃತ್ಯ ನಡೆದ ಸ್ಥಳದ ಸಿ.ಸಿ ಟಿ.ವಿ ಕ್ಯಾಮೆರಾಗಳ ಸುಳಿವು ಆಧರಿಸಿ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ತಿರುಪತಿಯಿಂದ ಬಂದ ನಾವು ಬೆಳಿಗ್ಗೆ 5 ಗಂಟೆಗೆ ವಿಧಾನಸೌಧದ ಬಳಿ ಬಸ್ ಇಳಿದುಕೊಂಡು ಕಂಪನಿ ಕಡೆಗೆ ನಡೆದು ಹೋಗುತ್ತಿದ್ದಾಗ, ನಾಲ್ವರು ಯುವಕರು ಸುಲಿಗೆ ಮಾಡಿದರು’ ಎಂದು ಟೆಕಿಗಳು ದೂರಿನಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry