7

ಜಯಂತಿ ಆರೋಗ್ಯದಲ್ಲಿ ಚೇತರಿಕೆ

Published:
Updated:
ಜಯಂತಿ ಆರೋಗ್ಯದಲ್ಲಿ ಚೇತರಿಕೆ

ಬೆಂಗಳೂರು: ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟಿ ಜಯಂತಿ ಆರೋಗ್ಯದಲ್ಲಿ ಮಂಗಳವಾರ ಸ್ವಲ್ಪ ಚೇತರಿಕೆ ಕಂಡುಬಂದಿದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

‘ವೈದ್ಯರ ಚಿಕಿತ್ಸೆಗೆ ತಾಯಿ ಸ್ಪಂದಿಸುತ್ತಿದ್ದಾರೆ. ಅವರ ಬಗ್ಗೆ ಸುಳ್ಳು ವದಂತಿಗಳು ಹರಡುತ್ತಿದ್ದು, ಅದಕ್ಕೆ ಕಿವಿಗೂಡಬಾರದು. ಎಲ್ಲರಲ್ಲೂ ಕೈ ಮುಗಿದು ಕೇಳುತ್ತೇನೆ’ ಎಂದು ಮಗ ಕೃಷ್ಣಕುಮಾರ್, ವಿಕ್ರಮ್‌ ಆಸ್ಪತ್ರೆ ಎದುರು ಸುದ್ದಿಗಾರರಿಗೆ ತಿಳಿಸಿದರು.

ಸಾವು ಎಂದು ಶಾಸಕನ ಟ್ವೀಟ್‌:  ‘ನಾಗರಹಾವು ಚಿತ್ರದ ಒನಕೆ ಓಬವ್ವ ಇನ್ನಿಲ್ಲ. ಖ್ಯಾತ ನಟಿ ಜಯಂತಿಯವರ ನಿಧನಕ್ಕೆ ನನ್ನ ಶ್ರದ್ಧಾಂಜಲಿ’ ಎಂದು ಶಾಸಕ ಸುರೇಶ್‌ಕುಮಾರ್‌, ಮಂಗಳವಾರ ರಾತ್ರಿ 10.34 ಗಂಟೆಗೆ ಟ್ವೀಟ್‌ ಮಾಡಿದ್ದಾರೆ.

ನಂತರ, ‘ಖ್ಯಾತ ನಟಿ ಜಯಂತಿಯವರ ಕುರಿತಾದ ಹರಿದಾಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಷ್ಟೇ!’ ಎಂದು ರಾತ್ರಿ 10.59 ಗಂಟೆಗೆ ಹಾಗೂ  ‘ಜಯಂತಿಯವರು ಬೇಗ ಹುಷಾರಾಗಿ ಆರೋಗ್ಯವಂತರಾಗಿ ಹೊರಗೆ ಬರಲಿ’ ಎಂದು ರಾತ್ರಿ 11.01ಕ್ಕೆ ಟ್ವೀಟ್‌ ಮಾಡಿದ್ದಾರೆ. ಸುರೇಶ್‌ಕುಮಾರ್‌ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿ ಹಲವರು ಮರು ಟ್ವೀಟ್‌ ಸಹ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry