ಪಾಕ್ ಪ್ರಧಾನಿಯನ್ನು ಭದ್ರತಾ ತಪಾಸಣೆಗೊಳಪಡಿಸಿದ ಅಮೆರಿಕ

6

ಪಾಕ್ ಪ್ರಧಾನಿಯನ್ನು ಭದ್ರತಾ ತಪಾಸಣೆಗೊಳಪಡಿಸಿದ ಅಮೆರಿಕ

Published:
Updated:
ಪಾಕ್ ಪ್ರಧಾನಿಯನ್ನು ಭದ್ರತಾ ತಪಾಸಣೆಗೊಳಪಡಿಸಿದ ಅಮೆರಿಕ

ವಾಷಿಂಗ್ಟನ್: ಅಮೆರಿಕದ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಕಾನ್‌ ಅಬ್ಬಾಸಿ ಅವರನ್ನು ಭದ್ರತಾ ತಪಾಸಣೆಗೊಳಪಡಿಸಲಾಗಿದೆ. ತಪಾಸಣೆ ನಡೆದ ನಂತರ ಧರಿಸಿದ್ದ ಕೋಟ್‍ನ್ನು ಕೈಯಲ್ಲಿ ಹಿಡಿದುಕೊಂಡು ಹೊರಗೆ ಬರುತ್ತಿರುವ ದೃಶ್ಯವನ್ನು ಪಾಕ್ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.

ಅನಾರೋಗ್ಯದಿಂದ ಬಳಲುತ್ತಿರುವ ಸಹೋದರಿಯನ್ನು ಭೇಟಿ ಮಾಡಲು ಅಬ್ಬಾಸಿ ಅವರು ಕಳೆದ ವಾರ ಅಮೆರಿಕಕ್ಕೆ ಹೋಗಿದ್ದರು. ಖಾಸಗಿ ಭೇಟಿ ಇದಾಗಿತ್ತು. ಈ ಭೇಟಿಯಲ್ಲಿ ಅಬ್ಬಾಸಿ ಅವರು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಭೇಟಿಯಾಗಿದ್ದರು. ಭಯೋತ್ಪಾದನೆಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ಭೇಟಿಯಲ್ಲಿ ಪೆನ್ಸ್, ಅಬ್ಬಾಸಿ ಅವರಿಗೆ ಹೇಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಬ್ಬಾಸಿ ಅವರನ್ನು ಭದ್ರತಾ ತಪಾಸಣೆಗೊಳಪಡಿಸಿರುವ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪಾಕಿಸ್ತಾನದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪಾಕಿಸ್ತಾನಕ್ಕೆ ಆದ ಅವಮಾನ, ಅಬ್ಬಾಸಿ ಪಾಕಿಸ್ತಾನಕ್ಕೆ ಅವಮಾನವಾಗುವಂತೆ ಮಾಡಿದ್ದಾರೆ ಎಂದು ಅಲ್ಲಿನ ಜನರು ಟೀಕಿಸಿದ್ದಾರೆ.

22 ಕೋಟಿ ಜನರನ್ನು ಪ್ರತಿನಿಧೀಕರಿಸುವ ವ್ಯಕ್ತಿಯೊಬ್ಬರ ಜತೆ ಅಮೆರಿಕ ಈ ರೀತಿ ಮಾಡಿರುವುದ ಸರಿಯಲ್ಲ. ಖಾಸಗಿ ಭೇಟಿ ಆಗಿದ್ದರೂ ದೇಶದ ಪ್ರಧಾನಿ ಎಂಬ ವಿಷಯವನ್ನು ಅಬ್ಬಾಸಿ ಮರೆಯಬಾರದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry