ಗಗನಸಖಿಗೆ ಲೈಂಗಿಕ ಕಿರುಕುಳ: 62 ವರ್ಷದ ಪುಣೆ ಉದ್ಯಮಿ ಬಂಧನ

7

ಗಗನಸಖಿಗೆ ಲೈಂಗಿಕ ಕಿರುಕುಳ: 62 ವರ್ಷದ ಪುಣೆ ಉದ್ಯಮಿ ಬಂಧನ

Published:
Updated:
ಗಗನಸಖಿಗೆ ಲೈಂಗಿಕ ಕಿರುಕುಳ: 62 ವರ್ಷದ ಪುಣೆ ಉದ್ಯಮಿ ಬಂಧನ

ನವದೆಹಲಿ: ಏರ್‌ ವಿಸ್ತಾರ ವಿಮಾನದ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ 62 ವರ್ಷದ ಪುಣೆಯ ಉದ್ಯಮಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ರಾಜೀವ್ ವಸಂತ್ ದಾನಿ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಾರ್ಚ್‌ 24ರಂದು ಲಖನೌ–ದೆಹಲಿ ನಡುವೆ ಸಂಚರಿಸುವ ಏರ್‌ ವಿಸ್ತಾರ ಸಂಸ್ಥೆಯ ವಿಮಾನದಲ್ಲಿ ಈ ಘಟನೆ ನಡೆದಿದೆ. ದೆಹಲಿಯ ಟಿ3 ಟರ್ಮಿನಲ್‌ನಲ್ಲಿ ವಿಮಾನದಿಂದ ಇಳಿಯುತ್ತಿರುವಾಗ ರಾಜೀವ್ ಗಗನಸಖಿಯೊಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಈ ಬಗ್ಗೆ ಗಗನಸಖಿ ನೀಡಿದ ದೂರಿನ ಅನ್ವಯ ವಿಮಾನ ನಿಲ್ದಾಣದಲ್ಲೇ ರಾಜೀವ್‌ ಅವರನ್ನು ಬಂಧಿಸಲಾಗಿದೆ.

‘ಪ್ರಯಾಣಿಕರ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ. ಇದು ಇತರ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಅಲ್ಲದೆ, ಅವರ ಆತ್ಮಗೌರವಕ್ಕೆ ಅವಮಾನ ಮಾಡಿದಂತಾಗುತ್ತದೆ’ ಎಂದು ಏರ್‌ ವಿಸ್ತಾರ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry