ನಾಳೆ ಬಗೆ ಬಗೆ ಇಡ್ಲಿ ಮೇಳ

7

ನಾಳೆ ಬಗೆ ಬಗೆ ಇಡ್ಲಿ ಮೇಳ

Published:
Updated:
ನಾಳೆ ಬಗೆ ಬಗೆ ಇಡ್ಲಿ ಮೇಳ

ಹೆಬ್ಬಾಳದ ಹೊವಾರ್ಡ್‌ ಜಾನ್ಸನ್ ಹೋಟೆಲ್‌ ವಿಶ್ವ ಇಡ್ಲಿ ದಿನದ ಪ್ರಯುಕ್ತ ಮಾರ್ಚ್‌ 30ರಂದು ಇಡ್ಲಿ ಮೇಳ ಆಯೋಜಿಸಿದೆ. ಮೇಳದಲ್ಲಿ ಇಡ್ಲಿ ಬಿರಿಯಾನಿ, ಮಡಿಕೆ ಇಡ್ಲಿ ಮತ್ತು ಇಡ್ಲಿ ಸಿಹಿಭಕ್ಷ್ಯಗಳನ್ನು ಸವಿಯಬಹುದು.

ಹೋಟೆಲ್‌ ಬಾಣಸಿಗ ಚಕ್ರಧರ್ ಅವರು ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವಿವಿಧ ಇಡ್ಲಿಗಳನ್ನು ಮಾಡಿ ಬಡಿಸಲಿದ್ದಾರೆ. ಕರ್ನಾಟಕದ ತಟ್ಟೆ ಇಡ್ಲಿ, ತಮಿಳುನಾಡಿನ ಮಲ್ಲಿಗೈ ಪೂ ಇಡ್ಲಿ, ಆಂಧ್ರ ಪ್ರದೇಶದ ಗುಂಟೂರು ಇಡ್ಲಿ ಹಾಗೂ ಕೇರಳದ ವಾಲೈ ಎಲೈಐ ಇಡ್ಲಿಗಳು ಮೆನುವಿನಲ್ಲಿವೆ. ಜೇಡಿಮಣ್ಣಿನ ಮಡಿಕೆಯ ಆವಿಯಿಂದ ತಯಾರಾದ ಮಡಿಕೆ ಇಡ್ಲಿ, ಹಾವರ್ಡ್‌ ಜಾನ್ಸನ್‌ ಕ್ಲಬ್‌ ಇಡ್ಲಿ, ಹೈದರಾಬಾದ್‌ ಶೈಲಿಯ ಇಡ್ಲಿ ದಮ್‌ ಬಿರಿಯಾನಿ, ಮಿಲ್ಲೆಟ್‌ ಸ್ಟಫ್ಡ್‌ ಇಡ್ಲಿ, ಸಿಹಿ ಇಡ್ಲಿಗಳು ಇಡ್ಲಿ ಪ್ರಿಯರ ಬಾಯಲ್ಲಿ ನೀರೂರಿಸುವುದು ಗ್ಯಾರಂಟಿ.

ಸ್ಥಳ: ಹೊವಾರ್ಡ್‌ ಜಾನ್ಸನ್ ಹೋಟೆಲ್, ಹೆಬ್ಬಾಳ. ಹೆಚ್ಚಿನ ಮಾಹಿತಿಗೆ ಸಂಪರ್ಕ:70228 95036

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry