ಭಾರತದ 600 ಜಿಲ್ಲೆಗಳ 7 ಲಕ್ಷ ಗ್ರಾಮಗಳ ದತ್ತಾಂಶ ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯ ಬಳಿ ಇದೆ: ಕ್ರಿಸ್ಟೋಫರ್‌ ವೈಲೀ

7

ಭಾರತದ 600 ಜಿಲ್ಲೆಗಳ 7 ಲಕ್ಷ ಗ್ರಾಮಗಳ ದತ್ತಾಂಶ ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯ ಬಳಿ ಇದೆ: ಕ್ರಿಸ್ಟೋಫರ್‌ ವೈಲೀ

Published:
Updated:
ಭಾರತದ 600 ಜಿಲ್ಲೆಗಳ 7 ಲಕ್ಷ ಗ್ರಾಮಗಳ ದತ್ತಾಂಶ ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯ ಬಳಿ ಇದೆ: ಕ್ರಿಸ್ಟೋಫರ್‌ ವೈಲೀ

ವಾಷಿಂಗ್ಟನ್‌: ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆಯ ಮಾಹಿತಿ ವಿಶ್ಲೇಷಕ ಕ್ರಿಸ್ಟೋಫರ್‌ ವೈಲೀ ಮತ್ತೊಂದು ಸ್ಫೋಟಕ ಮಾಹಿತಿ ನೀಡಿದ್ದು ಭಾರತದ 600 ಜಿಲ್ಲೆಗಳ 7 ಲಕ್ಷ ಗ್ರಾಮಗಳ ದತ್ತಾಂಶ ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೇ ಇನ್ನು ಕೆಲವು ರಾಜಕೀಯ ಪಕ್ಷಗಳಿಗೆ ನಮ್ಮ ಸಂಸ್ಥೆ ಕೆಲಸ ಮಾಡಿದೆ. ಜೆಡಿಯು ಪಕ್ಷ ಕೂಡ ನಮ್ಮ ಸಂಸ್ಥೆಯ ಗ್ರಾಹಕ ಪಕ್ಷವಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಬುಧವಾರ ಟ್ವಿಟರ್‌ನಲ್ಲಿ ವೈಲೀ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಭಾರತೀಯ ಪತ್ರಕರ್ತರ ಮನವಿಯ ಮೇರೆಗೆ ನಾವು ಅವರಿಗೆ ಮಾಹಿತಿ ನೀಡುತ್ತಿದ್ದೇವೆ. 2012ರಲ್ಲಿ ಉತ್ತರಪ್ರದೇಶದಲ್ಲಿ ಜಾತಿ ಗಣತಿ ಕೂಡ ಮಾಡಲಾಗಿದೆ ಎಂಬ ಅಂಶವನ್ನು ಅವರು ಬಹಿರಂಗ ಪಡಿಸಿದ್ದಾರೆ.

ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆ ಭಾರತದಲ್ಲಿ ಹಲವಾರು ಶಾಖೆಗಳನ್ನು ಹೊಂದಿದೆ. ಬೆಂಗಳೂರಿನಲ್ಲೂ ಒಂದು ಶಾಖೆ ಕೆಲಸ ಮಾಡುತ್ತಿದೆ ಎಂದು ವೈಲಿ ಸ್ಪಷ್ಟಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry