ದುಸ್ಸಾಹಸ ಬೇಡ: ಎಚ್ಚರಿಕೆ

7

ದುಸ್ಸಾಹಸ ಬೇಡ: ಎಚ್ಚರಿಕೆ

Published:
Updated:
ದುಸ್ಸಾಹಸ ಬೇಡ: ಎಚ್ಚರಿಕೆ

ಇಸ್ಲಾಮಾಬಾದ್‌: ‘ಒಂದು ವೇಳೆ ಗಡಿ ಪ್ರದೇಶದಲ್ಲಿ ಏನಾದರೂ ದುಸ್ಸಾಹಸಕ್ಕೆ ಕೈ ಹಾಕಿದರೆ ನಾವು ಸಮ್ಮನೆ ಬಿಡುವುದಿಲ್ಲ’ ಎಂದು ಪಾಕಿಸ್ತಾನದ ಸೇನೆಯು ಭಾರತಕ್ಕೆ ಎಚ್ಚರಿಕೆ ನೀಡಿದೆ.

‘ನಮ್ಮ ಸೇನಾ ಶಕ್ತಿಯ ಬಗ್ಗೆ ತುಚ್ಛೀಕರಣ ಬೇಡ. ಭಾರತಕ್ಕೆ ತಿರುಗುತ್ತರ ನೀಡಲು ನಾವು ಸದಾ ಸಿದ್ಧರಾಗಿದ್ದೇವೆ’ ಎಂದು ಸೇನಾಪಡೆಯ ವಕ್ತಾರ ಮೇಜರ್‌ ಜನರಲ್‌ ಅಸೀಫ್‌ ಗಫೂರ್‌ ಹೇಳಿದ್ದಾರೆ.

ಭಾರತವು ಏಕಾಏಕಿ ದಾಳಿ ನಡೆಸಿದರೆ ಏನು ಕ್ರಮ ಕೈಗೊಳ್ಳುವಿರಿ ಎಂದು ಕೇಳಿದ ಪ್ರಶ್ನೆಗೆ ಅಸೀಫ್‌ ಈ ರೀತಿಪ್ರತಿಕ್ರಿಯಿಸಿದ್ದಾರೆ.

ಗಡಿ ನಿಯಂತ್ರಣ ರೇಖೆಯ ಬಳಿ ಭಾರತವು ಪಾಕಿಸ್ತಾನದ 30 ಸೈನಿಕರನ್ನು ಈ ವರ್ಷ ಹತ್ಯೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry