ನೆರೆಯ ‘ಸ್ವರ್ಗ’

7

ನೆರೆಯ ‘ಸ್ವರ್ಗ’

Published:
Updated:

ನೆರೆ ರಾಷ್ಟ್ರಗಳಿಗೆ ಹೋಲಿಸಿದರೆ ‘ಭಾರತೀಯರಿಗೆ ನೆಮ್ಮದಿ ಗಗನ ಕುಸುಮ’ ಎಂಬ ವರದಿಯೊಂದು ಪ್ರಕಟವಾಗಿದೆ (ಪ್ರ.ವಾ., ಮಾರ್ಚ್ 28).

‘ನೆರೆಯ ಪಾಕಿಸ್ತಾನದ ಜನರು ಇತರ ಎಲ್ಲ ದೇಶಗಳ ನಾಗರೀಕರಿಗಿಂತ ಹೆಚ್ಚು ನೆಮ್ಮದಿಯಿಂದ ಇದ್ದಾರೆ’ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆ ಈಗ ಪ್ರಕಟವಾಗಿದೆ ಅಷ್ಟೇ. ಈ ಕುರಿತು ವರ್ಷಗಳ ಹಿಂದೆಯೇ ನಮ್ಮ ನಟಿಯೊಬ್ಬರು, ‘ಪಾಕಿಸ್ತಾನ ಸ್ವರ್ಗ’ ಎಂದು ಹೇಳಿದ್ದು ನೆನಪಾಗುತ್ತದೆ. ಬಹುಶಃ ಅವರದು ‘ದಿವ್ಯ’ದೃಷ್ಟಿಯೇ ಇರಬೇಕು.

ಮಾಧ್ಯಮಗಳ ಸಮೀಕ್ಷಾ ವರದಿ ಬರುವುದಕ್ಕೂ ಮೊದಲೇ ಅವರು ಈ ವಿಚಾರ ತಿಳಿಸಿರುವುದರಿಂದ ಅವರಿಗೆ ಅಭಿನಂದನೆ ಸಲ್ಲಿಸಬಹುದೇನೋ!

ಪಾಕಿಸ್ತಾನ ನೆಮ್ಮದಿಯಾಗಿರುವುದಕ್ಕೆ ಯಾರದೂ ಅಭ್ಯಂತರವಿಲ್ಲ. ಜೊತೆಗೆ ‘ನಿಮ್ಮ ನೆರೆ ದೇಶಗಳನ್ನೂ ನೆಮ್ಮದಿಯಿಂದ ಇರಲು ಬಿಡಿ’ ಎಂಬುದಷ್ಟೇ ನಮ್ಮ ಆಶಯ.

– ಕೀರ್ತಿ ಪಿ. ಎಂ., ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry