ಸ್ಪೇನ್‌ಗೆ ಮಣಿದ ಅರ್ಜೆಂಟೀನಾ

7

ಸ್ಪೇನ್‌ಗೆ ಮಣಿದ ಅರ್ಜೆಂಟೀನಾ

Published:
Updated:
ಸ್ಪೇನ್‌ಗೆ ಮಣಿದ ಅರ್ಜೆಂಟೀನಾ

ಮ್ಯಾಡ್ರಿಡ್‌: ಐಸಾಕೊ ಗಳಿಸಿದ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಸ್ಪೇನ್‌ ತಂಡ ವಿಶ್ವಕಪ್‌ ಅರ್ಹತಾ ಫುಟ್‌ಬಾಲ್‌ ಟೂರ್ನಿಯ ಸೌಹಾರ್ದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಬುಧವಾರ ನಡೆದ ಹೋರಾಟದಲ್ಲಿ ಸ್ಪೇನ್‌ 6–1 ಗೋಲುಗಳಿಂದ ಅರ್ಜೆಂಟೀನಾವನ್ನು ಸೋಲಿಸಿತು.‌

ಗಾಯದಿಂದಾಗಿ ಪ್ರಮುಖ ಆಟಗಾರ ಲಯೊನೆಲ್‌ ಮೆಸ್ಸಿ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಅರ್ಜೆಂಟೀನಾ ಸಂಪೂರ್ಣವಾಗಿ ಸೊರಗಿದಂತೆ ಕಂಡಿತು.

ಈ ತಂಡದ ನಿಕೊಲಸ್‌ 39ನೇ ನಿಮಿಷದಲ್ಲಿ ಗೋಲು ಗಳಿಸಿದರು. ಸ್ಪೇನ್‌ ತಂಡದ ಐಸಾಕೊ 27, 52 ಮತ್ತು 74ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಡಿಯಾಗೊ ಕೋಸ್ಟಾ (12), ತಿಯಾಗೊ ಅಲಕಾಂಟರ (55) ಮತ್ತು ಇಯಾಗೊ ಅಸ್ಪಸ್‌ (73) ತಲಾ ಒಂದು ಗೋಲು ದಾಖಲಿಸಿ ಜಯದ ಅಂತರ ಹೆಚ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry