ಗೋಲ್ಡ್‌ಕೋಸ್ಟ್‌ ತಲುಪಿದ ತಂಡ

7

ಗೋಲ್ಡ್‌ಕೋಸ್ಟ್‌ ತಲುಪಿದ ತಂಡ

Published:
Updated:

ಗೋಲ್ಡ್‌ಕೋಸ್ಟ್‌: ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ 200 ಸದಸ್ಯರ ತಂಡ ಬುಧವಾರ ಗೋಲ್ಡ್‌ಕೋಸ್ಟ್‌ ತಲುಪಿದೆ.

‘ಅಥ್ಲೆಟಿಕ್ಸ್‌, ಬಾಕ್ಸಿಂಗ್‌, ಬ್ಯಾಸ್ಕೆಟ್‌ಬಾಲ್‌, ಹಾಕಿ, ಟೆನಿಸ್‌ ಮತ್ತು ಶೂಟಿಂಗ್‌ ಸ್ಪರ್ಧಿಗಳಿದ್ದ ತಂಡ ಗೋಲ್ಡ್‌ಕೋಸ್ಟ್‌ನಲ್ಲಿರುವ ಕ್ರೀಡಾ ಗ್ರಾಮಕ್ಕೆ ತಲುಪಿದೆ’ ಎಂದು ಭಾರತ ಒಲಿಂಪಿಕ್ ಸಂಸ್ಥೆ ತಿಳಿಸಿದೆ.

‘ಭಾರತದ ಚೆಫ್ ಡಿ ಮಿಷನ್‌ ವಿಕ್ರಮ್‌ ಸಿಂಗ್‌ ಸಿಸೋಡಿಯಾ, ತಂಡದ ಮ್ಯಾನೇಜರ್‌ಗಳಾದ ನಾವದೇವ್‌, ಅಜಯ್‌ ನಾರಂಗ್‌ ಮತ್ತು ಶಿಯಾದ್‌ ಅವರು ಐಒಎ ಕಚೇರಿಯನ್ನು ಕ್ರೀಡಾಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ. ಅಥ್ಲೀಟ್‌ಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ. ಅವರ ಈ

ಕಾರ್ಯ ಪ್ರಶಂಸನೀಯ’ ಎಂದು ಐಒಎ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry