ಏರ್‌ ಇಂಡಿಯಾ: ಶೇ 76ರಷ್ಟು ಪಾಲು ಮಾರಾಟಕ್ಕೆ ನಿರ್ಧಾರ

7

ಏರ್‌ ಇಂಡಿಯಾ: ಶೇ 76ರಷ್ಟು ಪಾಲು ಮಾರಾಟಕ್ಕೆ ನಿರ್ಧಾರ

Published:
Updated:
ಏರ್‌ ಇಂಡಿಯಾ: ಶೇ 76ರಷ್ಟು ಪಾಲು ಮಾರಾಟಕ್ಕೆ ನಿರ್ಧಾರ

ನವದೆಹಲಿ: ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್‌ ಇಂಡಿಯಾದಲ್ಲಿನ (ಎ.ಐ) ತನ್ನ ಶೇ 76ರಷ್ಟು ಪಾಲು ಬಂಡವಾಳವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಷೇರು ವಿಕ್ರಯ ಕುರಿತು ಬುಧವಾರ ಬಿಡುಗಡೆ ಮಾಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ನಷ್ಟಪೀಡಿತ ‘ಎಐ’ ಮತ್ತು ಅದರ ಎರಡು ಅಂಗಸಂಸ್ಥೆಗಳಲ್ಲಿನ ಸರ್ಕಾರದ ಪಾಲನ್ನು ಮಾರಾಟ ಮಾಡಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ.

ಪಾಲು ಬಂಡವಾಳ ಮಾರಾಟದ ಜತೆಗೆ ಆಡಳಿತ ನಿಯಂತ್ರಣವನ್ನು ವರ್ಗಾಯಿಸಲೂ ಸರ್ಕಾರ ನಿರ್ಧರಿಸಿದೆ.  ಅರ್ನಸ್ಟ್‌ ಆ್ಯಂಡ್‌ ಯಂಗ್‌ ಎಲ್‌ಎಲ್‌ಪಿ ಇಂಡಿಯಾ, ಈ ಷೇರುವಿಕ್ರಯ ಪ್ರಕ್ರಿಯೆಯ ವಹಿವಾಟು ಸಲಹಾ ಸಂಸ್ಥೆಯಾಗಿರಲಿದೆ.

ಈ ಪಾಲು ಮಾರಾಟ ಪ್ರಕ್ರಿಯೆಯು ಏರ್‌ ಇಂಡಿಯಾ, ಅಗ್ಗದ ವಿಮಾನ ಯಾನ ಅಂಗ ಸಂಸ್ಥೆಯಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಏರ್‌ ಇಂಡಿಯಾ ಎಸ್‌ಎಟಿಎಸ್‌ ಏರ್‌ಪೋರ್ಟ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಅನ್ನು ಒಳಗೊಂಡಿರಲಿದೆ.

₹50 ಸಾವಿರ ಕೋಟಿಗಳಷ್ಟು ಸಾಲದ ಹೊರೆಗೆ ಸಿಲುಕಿರುವ ಏರ್‌ ಇಂಡಿಯಾದ ಷೇರು ವಿಕ್ರಯಕ್ಕೆ ಕೇಂದ್ರ ಸಚಿವ ಸಂಪುಟವು 2017ರ ಜೂನ್‌ನಲ್ಲಿ ಸಮ್ಮತಿ ನೀಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry