ಬೆಂಗಳೂರು ಗನ್ನರ್ಸ್‌ಗೆ ಜಯ

7

ಬೆಂಗಳೂರು ಗನ್ನರ್ಸ್‌ಗೆ ಜಯ

Published:
Updated:
ಬೆಂಗಳೂರು ಗನ್ನರ್ಸ್‌ಗೆ ಜಯ

ಬೆಂಗಳೂರು: ರಿಯಾಜ್ ಹಾಗೂ ಮಿಶಾಲ್ ಅವರ ತಲಾ ಒಂದು ಗೋಲು ನೆರವಿನಿಂದ ಬೆಂಗಳೂರು ಗನ್ನರ್ಸ್ ತಂಡ ಬಿಡಿಎಫ್‌ಎ ವತಿಯಿಂದ ಇಲ್ಲಿ ನಡೆಯುತ್ತಿರುವ ‘ಬಿ’ ಡಿವಿಷನ್ ಲೀಗ್ ಫುಟ್‌ಬಾಲ್‌ ಪಂದ್ಯದಲ್ಲಿ ಬುಧವಾರ ಜಯಿಸಿದೆ.

ಬೆಂಗಳೂರು ಗನ್ನರ್ಸ್‌ 2–1 ಗೋಲುಗಳಿಂದ ಆರ್‌ಬಿಐ ಎಫ್‌ಸಿ ತಂಡವನ್ನು ಮಣಿಸಿತು. ವಿಜಯೀ ತಂಡದ ರಿಯಾಜ್ (2ನೇ ನಿ.) ಹಾಗೂ ಮಿಶಾಲ್‌ (41ನೇ ನಿ.) ತಲಾ ಒಂದು ಗೋಲು ಗಳಿಸಿದರು. ಆರ್‌ಬಿಐ ತಂಡದ ವಿನೋದ್ ಕುಮಾರ್‌ (34ನೇ ನಿ.) ಏಕೈಕ ಗೋಲು ದಾಖಲಿಸಿದರು.

ಹ್ಯಾಟ್ರಿಕ್‌ ಗೋಲು: ದಿನದ ಎರಡನೇ ಪಂದ್ಯದಲ್ಲಿ ಬಾಷ್‌ ಕ್ಲಬ್‌ ತಂಡ 3–1 ಗೋಲುಗಳಿಂದ ನ್ಯಾಷನಲ್ಸ್‌ ಎಫ್‌ಸಿ ಎದರು ಗೆದ್ದಿತು. ಬಾಷ್‌ ಕ್ಲಬ್ ತಂಡದ ಅರುಣ್ ಕುಮಾರ್‌ (32, 48, 62ನೇ ) ಹ್ಯಾಟ್ರಿಕ್ ಗೋಲು ದಾಖಲಿಸಿದರು. ನ್ಯಾಷನಲ್ಸ್‌ ಪರ ಅಭಿ (64ನೇ ನಿ.) ಏಕೈಕ ಗೋಲು ಗಳಿಸಿದರು.

ಅಂತಿಮ ಪಂದ್ಯದಲ್ಲಿ ಗಜಾನನ ಎಫ್‌ಸಿ 5–0 ಗೋಲುಗಳಿಂದ ಎಕ್ಸ್‌ಎಲ್‌ಆರ್‌ ವಿರುದ್ಧ ಗೆದ್ದರು. ಸೂರ್ಯ (1ನೇ ನಿ.) ಹಾಗೂ ವರದರಾಜ್‌ (50ನೇ ನಿ.), ರೆವಾಲ್ಡೊ (54ನೇ ನಿ.), ಸ್ಟೀಫನ್‌ (58ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry