ಮೋಸದಾಟ ಬಯಲು ಮಾಡಿದ ಸೂಟುಪ್ರಿಯ ಆಸ್ಕರ್‌!

7

ಮೋಸದಾಟ ಬಯಲು ಮಾಡಿದ ಸೂಟುಪ್ರಿಯ ಆಸ್ಕರ್‌!

Published:
Updated:
ಮೋಸದಾಟ ಬಯಲು ಮಾಡಿದ ಸೂಟುಪ್ರಿಯ ಆಸ್ಕರ್‌!

ಕೇಪ್‌ಟೌನ್: ಜೋಟಾನಿ ಆಸ್ಕರ್ ಅವರು ತಮ್ಮ ಹೆಗಲ ಮೇಲೆ ಬೃಹತ್ ಗಾತ್ರದ ವಿಡಿಯೊ ಕ್ಯಾಮೆರಾ ಎತ್ತಿಕೊಂಡು ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟರೆ ಸಾಕು ಪ್ರೇಕ್ಷಕರ ಚಿತ್ತ ಅವರತ್ತ ಹರಿಯುತ್ತಿತ್ತು. ನೆತ್ತಿ ಸುಡುವ ಬಿಸಿಲಿದ್ದರೂ ತ್ರೀ ಪೀಸ್ ಸೂಟು, ಬೂಟು ಧರಿಸಿಯೇ ಅವರು  ಕಾರ್ಯನಿರ್ವಹಿಸುತ್ತಿದ್ದುದೇ ಜನರ ಅಚ್ಚರಿಗೆ ಕಾರಣವಾಗಿತ್ತು.

ಆದರೆ ಕಳೆದ ನಾಲ್ಕು ದಿನಗಳಿಂದ ಅವರನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರ ಚೆಂಡು ವಿರೂಪಗೊಳಿಸಿದ ಕೃತ್ಯವನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಎಳೆಎಳೆಯಾಗಿ ಸೆರೆಹಿಡಿದ ಸೌತ್ ಆಫ್ರಿಕಾ ಟಿ.ವಿ.ಯ  ಆಸ್ಕರ್ ಈಗ ಕ್ರಿಕೆಟ್‌ಪ್ರೇಮಿಗಳ ಹೃದಯ ಗೆದ್ದಿದ್ದಾರೆ.  ಅಂದಹಾಗೆ ಅವರು ಧರಿಸುವ ಸೂಟು ಸಿದ್ಧವಾಗಿರುವುದು ಕೋಲ್ಕತ್ತದಲ್ಲಿ ಎಂದು ‘ದಿ ಸನ್’ ವೆಬ್‌ಸೈಟ್ ಪ್ರಕಟಿಸಿದೆ.

‘ಬಿಸಿಲಿನ ಧಗೆಯಿಂದ ನನ್ನ ಚರ್ಮಕ್ಕೆ ತೊಂದರೆಯಾಗದಿರಲಿ ಎಂದೇ ನಾನು ಸೂಟು ಧರಿಸುತ್ತೇನೆ. ಆದರೆ ಜನ ನನ್ನನ್ನು ನೋಡಿ ತಮಾಷೆ ಮಾಡುತ್ತಾರೆ. ಅದರಿಂದ ಯಾವಾಗಲೂ ಏಕಾಗ್ರತೆ ಕಳೆದುಕೊಂಡಿಲ್ಲ’ ಎಂದು ಆಸ್ಕರ್ ಹೇಳಿದ್ದಾರೆ ಅವರ ಸೂಟು ಧರಿಸುವ ಹವ್ಯಾಸದ ಕುರಿತು ಬಿಸಿಸಿಐ ಡಾಟ್‌ ಟಿವಿಯಲ್ಲಿ ಕಿರುಚಿತ್ರ ನಿರ್ಮಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry