ಏ. 7ರಿಂದ ಅಖಿಲ ಭಾರತ ಬ್ಯಾಡ್ಮಿಂಟನ್‌

7

ಏ. 7ರಿಂದ ಅಖಿಲ ಭಾರತ ಬ್ಯಾಡ್ಮಿಂಟನ್‌

Published:
Updated:

ಬೆಂಗಳೂರು: ಸೆಲೆನೈಟ್‌ ಸ್ಪೋರ್ಟ್ಸ್‌ ಅಕಾಡೆಮಿ ಆಶ್ರಯದಲ್ಲಿ ಅಖಿಲ ಭಾರತ ಸಬ್‌ ಜೂನಿಯರ್‌ ಮತ್ತು ಸೀನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ಏಪ್ರಿಲ್‌ 7ರಿಂದ 9ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಕನಕಪುರ ರಸ್ತೆಯ ಎಸ್‌.ಎಂ.ವಿ.ಎನ್‌ ಮತ್ತು ಬಾಪು ಇನ್ಸ್‌ಟಿಟ್ಯೂಟ್‌ನ ಅಂಗಳದಲ್ಲಿ ಪಂದ್ಯಗಳು ಜರುಗಲಿವೆ.

11 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರಿಗಾಗಿ ಸಿಂಗಲ್ಸ್‌ ವಿಭಾಗದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 13 ಮತ್ತು 15 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರು ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಸೆಣಸಲಿದ್ದಾರೆ.

ಟೂರ್ನಿಯು ಒಟ್ಟು ₹ 8 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ. ಭಾಗವಹಿಸುವರರು ಮಾರ್ಚ್‌ 31ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ನಿರ್ದೇಶಕ  ನಂದನ್ ಮಂಜುನಾಥ (ಮೊಬೈಲ್‌: 7899418789) ಅವರನ್ನು ಸಂಪರ್ಕಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry